janadhvani

Kannada Online News Paper

ಕೆಎಂವೈಎ ದಮ್ಮಾಂ ವತಿಯಿಂದ ಇಫ್ತಾರ್ ಮೀಟ್

ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ (ಕೆಎಂವೈಎ) ದಮ್ಮಾಂ, ಸೌದಿ ಅರೇಬಿಯ ಇದರ ವತಿಯಿಂದ ರಮಳಾನ್ ಇಫ್ತಾರ್ ಕೂಟ ದಿನಾಂಕ 20, ಫೆಬ್ರವರಿ 2026 ಶುಕ್ರವಾರ ಜುಬೈಲ್ ನಲ್ಲಿ ಜರಗಿತು.
ಸಂಘದ ಉಪಾಧ್ಯಕ್ಷ ಇಜಾಝ್ ಇಸ್ಮಾಯೀಲ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಅಮಾನುದ್ದೀನ್ ಪವಿತ್ರ ಖುರ್ ಆನ್ ಸೂರ: ಖದ್ರ್ ಪಠಿಸಿದರು.

ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರು ರಮಳಾನ್ ಸಂದೇಶ ನೀಡಿದರು.
ಪವಿತ್ರ ರಮಳಾನ್ ನ ಪುಣ್ಯವೇರಿದ ದಿನಗಳಲ್ಲಿ ಆರಾಧನೆ, ಪ್ರವರ್ತನೆಗಳನ್ನು ಟೈಂ ಟೇಬಲ್ ತಯಾರಿಸಿ ಅದರಂತೆ ಕಾರ್ಯಗತ ಗೊಳಿಸಿ ಇಹ-ಪರ ಯಶಸ್ವಿಗೊಳಿಸಿರಿ ಹಾಗೂ ತಹಜ್ಜುದ್ ಮತ್ತು ಇಸ್ತಿಗ್ಫಾರ್ ಮೂಲಕ ಅಲ್ಲಾಹನ ಸಾಮೀಪ್ಯ ಪಡೆಯಿರಿ ಎಂದು ನುಡಿದರು.

ಮಾಜಿ ಅಧ್ಯಕ್ಷ ಪಿ.ಎ ಮುಹಮ್ಮದ್ ಬಶೀರ್, ನೌಶಾದ್ ರಶೀದ್, ಕೋಶಾಧಿಕಾರಿ ಪಿ.ಎಂ. ತಾಜುದ್ದೀನ್, ಅತಿಥಿ ಶಫಿ ಅಹ್ಮದ್, ಅಹ್ಮದ್ ಶುಐಬ್, ಸೈಫುಲ್ಲ ಪಿ.ಇ., ಆರಿಫ್ ಪಿ.ಎಂ. ಕಾರ್ಯದರ್ಶಿಗಳಾದ ಮುಹ್ಸಿನ್, ಅಬ್ದುಲ್ ಗಫೂರ್
ಹಾಗೂ 50 ಮಂದಿ ಸದಸ್ಯರು ಇಫ್ತಾರ್ ಕೂಟದಲ್ಲಿ
ಭಾಗವಹಿಸಿದ್ದರು.

ಇಫ್ತಾರ್ ಕೂಟಕ್ಕೆ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ಪ್ರೋತ್ಸಾಹ ನೀಡಿದ ಸದಸ್ಯರಿಗೆ, ರಮಳಾನ್ ಕಿಟ್ ಮತ್ತು ಇಫ್ತಾರ್ ಗೆ ಸಹಕರಿಸಿದ ರಫೀಖ್ ಜುಬೈಲ್, ಕಲಂದರ್, ನೌಫಲ್, ಅಬ್ದುಲ್ಲತೀಫ್, ಶಕೀಲ್ ಹಾಗೂ ಇನ್ನಿತರ ಸದಸ್ಯರಿಗೆ ವಿಶೇಷ ಧನ್ಯವಾದ ಅರ್ಪಿಸಲಾಯಿತು.