janadhvani

Kannada Online News Paper

DKSC ಹಫರ್ ಅಲ್ ಬಾತಿನ್ ಘಟಕದ 31ನೇ ವಾರ್ಷಿಕ ಮಹಾಸಭೆ

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ದಮ್ಮಾಮ್ ವಲಯ ಅಧಿನದ ಹಫರ್ ಅಲ್ ಬಾತಿನ್ ಘಟಕದ ಮಹಾಸಭೆಯು
ದಿನಾಂಕ 5, ಫೆಬ್ರುವರಿ 2026 ಗುರುವಾರ ರಾತ್ರಿ ಸಿರಾಜ್ ಕುಂತೂರುರವರ ಅಧ್ಯಕ್ಷತೆಯಲ್ಲಿ ಹಫರ್ ಸಭಾಂಗಣದಲ್ಲಿ ಜರಗಿತು. ಝುಬೈರ್ ಸಖಾಫಿ ಉಸ್ತಾದ್ ರವರ ದುಆದೊಂದಿಗೆ ಚಾಲನೆ ನೀಡಲಾಯಿತು.

ಸಾದಿಖ್ ಸಾಗರ್ ಖಿರಾಅತ್ ಹಾಗೂ ರಿಯಾಝ್ ಉಳ್ಳಾಲರವರು ಸ್ವಾಗತಿಸಿದರು. ಸಭೆಯ ಉದ್ಘಾಟನೆಯನ್ನು ಹಫರ್ ಅಲ್ ಬಾತಿನ್ ಉಸ್ತುವಾರಿ ಅಬೂಬಕ್ಕರ್ ಬರ್ವರವರು ನೆರವೇರಿಸಿದರು. ಇಖ್ಬಾಲ್ ಮರ್ದಾಳ ವಾರ್ಷಿಕ ವರದಿ ಹಾಗೂ ಮುಹಮ್ಮದ್ ಅಮ್ಮಂಜೆ ಲೆಕ್ಕ ಪತ್ರ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆಯಲಾಯಿತು.

ಅಬ್ದುಲ್ ಮಜೀದ್ ಕಣ್ಣಂಗಾರ್ ರವರು ಅತಿಥಿ ಭಾಷಣದಲ್ಲಿ ಉಸ್ರತ್ ಅಲ್ ಇಹ್ಸಾನ್ ನ ಬಗ್ಗೆ ಸವಿ ಸ್ತಾರವಾಗಿ ವಿವರಿಸಿದರು.
ಡಿಕೆಯಸ್ಸಿ ದಮಾಮ್ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತೃತ್ವದಲ್ಲಿ
2026-27ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ಮದನಿ ಮುರ್ಡೇಶ್ವರ, ಉಪಾಧ್ಯಕ್ಷರಾಗಿ . 1.ಅಸ್ಲಮ್ ಎರ್ಮಾಲ್,
2.ಅಹ್ಮದ್ ಸಾದಿಖ್ ಸಾಗರ್, ಪ್ರಧಾನ ಕಾರ್ಯದರ್ಶಿಯಾಗಿ ಇಖ್ಬಾಲ್ ಮರ್ದಾಳ, ಕಾರ್ಯದರ್ಶಿಯಾಗಿ 1.ಮುಹಮ್ಮದ್ ಅಮ್ಮುoಜೆ,
2.ಅಬ್ದುಲ್ ಖಾದರ್ ಬಜಾಲ್, ಹಣಕಾಸು ಕಾರ್ಯದರ್ಶಿಯಾಗಿ ಅಹ್ಮದ್ ಶಾಹ್ ಮದ್ದಡ್ಕ,
ಸಮಿತಿಯ ಅಭಿವೃದ್ಧಿ ಅಧ್ಯಕ್ಷರಾಗಿ ಸಿರಾಜ್ ಕುಂತೂರ್, ಸಂವಹನಾ ಕಾರ್ಯದರ್ಶಿಯಾಗಿ ರಿಯಾಝ್ ಉಳ್ಳಾಲ, ಪ್ರಧಾನ ಸಲಹೆಗಾರರಾಗಿ ಇಲ್ಯಾಸ್ ಮರ್ದಾಳ, ಅಬ್ದುರಶೀದ್ ಕುಂಜಾಲ್, ಲೆಕ್ಕಪರಿಶೊದಕರಾಗಿ ಹೈದರ್ ಮರ್ದಾಳರವರನ್ನು ಹಾಗೂ 12ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ನೇಮಿಸಲಾಯಿತು.

ಈ ಸಂದರ್ಭ ಡಿಕೆಎಸ್ಸಿ ಕೇಂದ್ರ ಸಮಿತಿಯ ಅಬ್ದುಲ್ ಮಜೀದ್ ಕಣ್ಣಂಗಾರ್,ಕೇಂದ್ರ ಪ್ರಧಾನ ಕಾರ್ಯದರ್ಶಿ,ದಮ್ಮಾಮ್ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ,
ಓರ್ಗನೈಝರ್ ಕೇಂದ್ರ ಸಮಿತಿ ಉಸ್ತಾದ್ ಅಬ್ದುರ್ರಶೀದ್ ಸಅದಿ, ಅಬೂಬಕ್ಕರ್ ಬರ್ವ ಸದಸ್ಯರು ಕೇಂದ್ರ ಸಮಿತಿ, ಅಬ್ದುಲ್ ಅಝೀಝ್ ಮೂಳೂರು ಉಪಾಧ್ಯಕ್ಷರು ಕೇಂದ್ರ ಸಮಿತಿ, ಅಬ್ದುಲ್ ಕರೀಂ ಪಾಣೆಮಂಗಳೂರು ಹಣಕಾಸು ಕಾರ್ಯದರ್ಶಿ ದಮಾಮ್ ವಲಯ, ಉಸ್ಮಾನ್ ಹೊಸಂಗಡಿ ಅಧ್ಯಕ್ಷರು ಅಲ್ ಖೋಬರ್ ಘಟಕ, ಮುಹಮ್ಮದ್ ಹನೀಫ್ ಜೆಪ್ಪು ಅಧ್ಯಕ್ಷರು ತುಖ್ಬ ಘಟಕ, ಶಾಫಿ ಶುಐಬ್ ಪ್ರಧಾನ ಕಾರ್ಯದರ್ಶಿ ಮುಲಾಖಾತ್ ಸಮಿತಿ ದಮಾಮ್ ವಲಯ, ಅಶ್ರಫ್ ಚಿಕ್ಕಮಗಳೂರು ಅಧ್ಯಕ್ಷರು ಮದದ್ ವಿಂಗ್, ಉಸ್ತಾದ್ ಝುಬೈರ್ ಸಖಾಫಿ ದಮಾಮ್ ವಲಯ ಉಪಸ್ಥಿತರಿದ್ದರು. ಇಖ್ಬಾಲ್ ಮರ್ದಾಳ ಇವರು ಧನ್ಯವಾದ ನೆರವೇರಿಸಿ ಕಫ್ಫಾರತುಲ್ ಮಜ್ಲಿಸ್ ಮತ್ತು ಸ್ವಲಾತುನ್ನಬಿ (ಸ) ಯೊಂದಿಗೆ 31ನೇ ವರ್ಷದ ಡಿಕೆಯಸ್ಸಿ ಘಟಕದ ವಾರ್ಷಿಕ ಮಹಾಸಭೆ ಮುಕ್ತಾಯಗೊಂಡಿತು.