janadhvani

Kannada Online News Paper

ಫೆ.12: ಮಂಜನಾಡಿ, ತೌಡುಗೋಳಿ ಕ್ರಾಸ್ ನಲ್ಲಿ ಸುನ್ನೀ ಆದರ್ಶ ಸಂಗಮ

ಕರ್ನಾಟಕ ಮುಸ್ಲಿಂ ಜಮಾಅತ್ , ಎಸ್.ವೈ.ಎಸ್, ಎಸ್ಸೆಸ್ಸೆಫ್, ಎಸ್.ಎಂ ಎ ಹಾಗೂ ಎಸ್.ಜೆ.ಎಂ ತೌಡುಗೋಳಿ, ಮೋಂಟುಗೋಳಿ ಹಾಗೂ ಮಂಜನಾಡಿ ಸರ್ಕಲ್ ಗಳ ಸಂಯುಕ್ತ ಆಶ್ರಯದಲ್ಲಿ ಸುನ್ನೀ ಆದರ್ಶ ಸಂಗಮವು ಕ್ಲಿಪ್ಪಿಂಗ್ ಸಹಿತ ಫೆಬ್ರವರಿ 12 ಗುರುವಾರ ಸಂಜೆ 7:00 ಗಂಟೆಗೆ ತೌಡುಗೋಳಿ ಕ್ರಾಸ್ ಜಂಕ್ಷನ್ ನಲ್ಲಿ ನಡೆಯಲಿರುವುದು.

ಸ್ವಾಗತ ಸಮಿತಿ ಚಯರ್ ಮ್ಯಾನ್ ಅಬ್ಬಾಸ್ ಹಾಜಿ ತೌಡುಗೋಳಿ ಅಧ್ಯಕ್ಷತೆ ವಹಿಸಲಿರುವರು.
ಅಬ್ಬುರ್ರಹ್ಮಾನ್ ಮದನಿ ಮೂಳೂರು ಕಾರ್ಯಕ್ರಮ ಉದ್ಘಾಟಿಸಲಿರುವರು. ಖ್ಯಾತ ವಾಗ್ಮಿ ಮುಹಮ್ಮದ್‌ ಅಶ್ರಫ್ ಸಅದಿ ಬಾಕಿಮಾರ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ ,ಉಸ್ಮಾನ್ ಸಅದಿ ಪಟ್ಟೋರಿ ಮೊದಲಾದ ಧಾರ್ಮಿಕ,ಸಾಮಾಜಿಕ ಹಾಗೂ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಕನ್ವೀನರ್ ಮಹಮ್ಮದ್ ಜೀಲಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.