janadhvani

Kannada Online News Paper

ಸೆಪ್ಟೆಂಬರ್.14: ದೇರಳಕಟ್ಟೆಯಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ

ಮಂಗಳೂರು: ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ವತಿಯಿಂದ ಸೆಪ್ಟೆಂಬರ್ 14 ಆದಿತ್ಯವಾರ ಮಂಗಳೂರಿನ ದೇರಳಕಟ್ಟೆ ನವಾಝ್ ಕಟ್ಟಡ ಸಭಾಂಗನದಲ್ಲಿ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 9ಗಂಟೆಗೆ ಕವಿಗಳ ನೋಂದಾವಣೆ ಪ್ರಕ್ರಿಯೆ ಶುರುವಾಗಳಿದ್ದು 9:30ಕ್ಕೆ ಕವಿಗೋಷ್ಠಿ ಆರಂಭ ಗೊಳ್ಳಲಿದೆ.
ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ನಿವೃತ್ತ ಡಿ ಸಿ ಪಿ ಜಿ ಏ ಬಾವಾ, ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.
ಕವಿಗೋಷ್ಠಿಗೆ ರಾಜ್ಯದ ವಿವಿದ ಕಡೆಗಳಿಂದ ಕವಿಗಳು ಆಗಮಿಸಲಿದ್ದು ಹಿರಿಯ ಸಾಹಿತಿ ನಾರಯಣ ರೈ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಕೆಲವು ಸಾಧಕರಿಗೆ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಹಾಗೂ ಸಾಹಿತಿ ಭೀಮರಾವ್ ವಾಷ್ಠರ್ ರವರಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಲಿರುವುದು ಎಂದು ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಅನಿಲಕಟ್ಟೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.