ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಕಾರ್ಯಕಾರಿಣಿ ಸಮಿತಿ ಮತ್ತು ದ ಕ ಜಿಲ್ಲಾ ವೆಸ್ಟ್, ಈಸ್ಟ್ ಹಾಗು ಸೌತ್ ಪದಾಧಿಕಾರಿಗಳ ಜಂಟಿ ಸಭೆ ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಓಕೆ ಸಈದ್ ಉಸ್ತಾದ್ ದುಆ ನೆರವೇರಿಸಿದರು. ಎಸ್ ಜೆ ಎಂ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಮೂರುಗೋಳಿ ಸಭೆಯನ್ನು ಉದ್ಘಾಟಿಸಿದರು.

ಎಸ್ ಜೆ ಎಂ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಇದರ ನೂರನೇ ವಾರ್ಷಿಕದ ಪ್ರಯುಕ್ತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಎಸ್ ಜೆ ಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನ ನಡೆಯಲಿದೆ. ಕರ್ನಾಟಕ ರಾಜ್ಯ ಮಟ್ಟದ ಉದ್ಘಾಟನೆ ಮಂಗಳೂರಿನ ಟೌನ್ ಹಾಲಿನಲ್ಲಿ ಅಕ್ಟೋಬರ್ 14 ರಂದು ನಡೆಯಲಿದ್ದು, ದ.ಕ ವೆಸ್ಟ್, ಈಸ್ಟ್ ಮತ್ತು ಸೌತ್ ಜಿಲ್ಲಾ ಅಧೀನದ ಎಲ್ಲಾ ರೇಂಜುಗಳ ಮುಅಲ್ಲಿಮರು ಭಾಗವಹಿಸಲಿದ್ದಾರೆ. ಮುಅಲ್ಲಿಂ ಸಮ್ಮೇಳನದಲ್ಲಿ ಮೂರು ಪ್ರಮುಖ ವಿಷಯಗಳಲ್ಲಿ ತರಗತಿ ನಡೆಯಲಿದ್ದು, ಕರ್ನಾಟಕ ಕೇರಳದ ಪ್ರಮುಖ ಉಲಮಾಗಳು ವಿಷಯ ಮಂಡನೆ ಮಾಡಲಿರುವರು ಎಂದು ತಿಳಿಸಿದರು.
ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಮತ್ತು ಸೌತ್ ಜಿಲ್ಲಾಧ್ಯಕ್ಷರಾದ ಯಾಕೂಬ್ ಲತೀಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಎಸ್ ಜೆ ಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನದ ನಿರ್ವಹಣಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಚೇರ್ಮಾನಾಗಿ ಅಬ್ದುಲ್ ಹಮೀದ್ ಸಅದಿ ಮೂರುಗೋಳಿ, ಚೀಫ್ ಕನ್ವೀನರಾಗಿ ಯಾಕೂಬ್ ಲತೀಫಿ, ಕೋಶಾಧಿಕಾರಿಯಾಗಿ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಆಯ್ಕೆಯಾದರು.
ವೈಸ್ ಚೇರ್ಮಾನುಗಳುಗಳಾಗಿ ಇಬ್ರಾಹಿಂ ಸಖಾಫಿ ಕಬಕ, ಸಿದ್ದೀಖ್ ಸಅದಿ ಸೌತ್, ಮಹಮ್ಮದ್ ಸಖಾಫಿ ವೆಸ್ಟ್, ಲತೀಫ್ ಸಖಾಫಿ ಸೌತ್, ಹಾಫಿಲ್ ಹನೀಫ್ ಮಿಸ್ಬಾಹಿ, ವೈಸ್ ಕನ್ವೀನರುಗಳಾಗಿ ಇಸ್ಮಾಯಿಲ್ ಮದನಿ ಈಸ್ಟ್, ಅಕ್ಬರ್ ಅಲಿ ಮದನಿ, ಚಿಪ್ಪಾರ್ ಅಬ್ದುಲ್ ರಹ್ಮಾನ್ ಸಖಾಫಿ, ಇಬ್ರಾಹಿಂ ಸಖಾಫಿ ಸೆರ್ಕಳ, ಇಸ್ಮಾಯಿಲ್ ಸಅದಿ ಉರುಮಣೆ, ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಉಳ್ಳಾಲ, ಸದಸ್ಯರುಗಳಾಗಿ ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಕೆ ಕೆ ಎಂ ಕಾಮಿಲ್ ಸಖಾಫಿ ಸುರಿಬೈಲು, ಪುಂಡೂರು ಇಬ್ರಾಹಿಂ ಸಖಾಫಿ, ಪಿ ಎಂ ಮುಹಮ್ಮದ್ ಮದನಿ ಪೂಡಲ್, ಇಬ್ರಾಹಿಮ್ ನಈಮಿ, ಶರೀಫ್ ಸಖಾಫಿ ನೆಕ್ಕಿಲ್, ಅಬ್ದುಲ್ ಅಝೀಝ್ ನೂರಾನಿ, ಸಿರಾಜುದ್ದೀನ್ ಸಖಾಫಿ ಮುರ, ಅಬೂಬಕರ್ ಹಂದಾನೀ ಸುಳ್ಯ, ಅಶ್ರಫ್ ಇಮ್ದಾದಿ, ಸಿದ್ದೀಖ್ ಸಅದಿ ಈಸ್ಟ್, ಅಶ್ರಫ್ ಹಿಮಮಿ ಈಸ್ಟ್, ರಫೀಖ್ ಲತೀಫಿ ಸೌತ್, ರಫೀಖ್ ಝುಹ್ರಿ ಸೌತ್, ಹೈದರ್ ಅಶ್ರಫಿ ಸೌತ್, ಹೈದರ್ ಅಲಿ ಹಿಮಮಿ ವೆಸ್ಟ್, ನವಾಝ್ ಸಖಾಫಿ ಉಳ್ಳಾಲ, ಶರೀಫ್ ಸಖಾಫಿ ದಿಡುಪೆ, ರಝ್ಝಾಖ್ ಲತೀಫಿ ಕುಂತೂರು ಇವರುಗಳನ್ನು ಆರಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿ ಸುರಿಬೈಲು ಸ್ವಾಗತಿಸಿದರು.







