janadhvani

Kannada Online News Paper

ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ದ.ಕ ವೆಸ್ಟ್ ಜಿಲ್ಲಾ: 79 ನೇ ಸ್ವಾತಂತ್ರ್ಯೋತ್ಸವ

ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ 79 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಎಸ್.ವೈ.ಎಸ್ ರಾಜ್ಯ ಕಛೇರಿ ಮುಂಭಾಗದಲ್ಲಿ ನಡೆಯಿತು.

ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ದ್ವಜಾರೋಹಣ ಮಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ,ಜಿಲ್ಲಾ ಉಪಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್ ಸಂದೇಶ ಭಾಷಣ ಮಾಡಿದರು.

ಸ್ಥಳೀಯ ನಾಯಕರಾದ ಕೆ.ಸಿ ಸುಲೈಮಾನ್ ಮುಸ್ಲಿಯಾರ್,ಅಬ್ದುಲ್ ಅಝೀಝ್ ಬಿಕರ್ನಕಟ್ಟೆ,ಮಹಮ್ಮದ್ ಆಝಾದ್ ಜೆಪ್ಪು ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಹಸನ್ ಪಾಂಡೇಶ್ವರ್ ಸ್ವಾಗತಿಸಿದರು.ಜಿಲ್ಲಾ ನಾಯಕರಾದ ಇಬ್ರಾಹಿಂ ಸಖಾಫಿ ಸೆರ್ಕಳ ಧನ್ಯವಾದಗೈದರು.