ಕಾರ್ಕಳ : ನೂರುಲ್ ಹುದಾ ಜುಮ್ಮಾ ಮಸೀದಿ ಬಜಗೋಳಿ ಇದರ ಆಶ್ರಯದಲ್ಲಿ 79ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಮಸೀದಿ ವಠಾರದಲ್ಲಿ ನಡೆಯಿತು.
ಮಸೀದಿ ಅಧ್ಯಕ್ಷರಾದ ಪುತ್ತಾಕ ನವರು ಧ್ವಜಾರೋಹಣವನ್ನು ನೆರವೇರಿಸಿದರು. ಗೌರಧ್ಯಕ್ಷರಾದ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಬಜಗೋಳಿ ಸಂದೇಶ ಭಾಷಣ ಮಾಡಿದರು.
ಮಸೀದಿ ಖತೀಬರು ಹನೀಫ್ ಮದನಿ ಉಸ್ತಾದ್, SMA ಕಾರ್ಕಳ ರೀಜಿನಲ್ ಮಾಜಿ ಅಧ್ಯಕ್ಷರು ಹಾಜಿ H.ಸುಲೈಮಾನ್, ಬಜಗೋಳಿ ಆಡಳಿತ ಸಮಿತಿಯ ಸದಸ್ಯರು, ಜಮಾಅತ್’ರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.







