“ಮುತ್ತು ರಸೂಲುಲ್ಲಾಹ್ (ﷺِ) ರವರ ಚರ್ಯೆಯನ್ನು ಜೀವಂತಗೊಳಿಸಿರಿ” ಎಂಬ ಘೋಷವಾಕ್ಯದೊಂದಿಗೆ ಹಬೀಬ್ (ﷺِ) ರವರ 1500 ನೇ ಜನ್ಮ ದಿನದ ಪ್ರಯುಕ್ತ ಕೆಸಿಎಫ್ ಮನಾಮ ಸೆಕ್ಟರ್ ಬೃಹತ್ ಮೀಲಾದ್ ಕಾರ್ಯಕ್ರಮವು ದಿನಾಂಕ 19/09/2025 ರಂದು ಶುಕ್ರವಾರ ರಾತ್ರಿ ಮನಾಮ ಕೆಸಿಟಿ ಹಾಲ್’ನಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಜಾಮಿಅ ಸಅದಿಯಾ ಪ್ರೊಫೆಸರ್, ಅಂತಾರಾಷ್ಟ್ರೀಯ ಖ್ಯಾತ ವಾಗ್ಮಿಯೂ ಆದ ಬಹು. ಕೆ.ಪಿ. ಹುಸೈನ್ ಸಅದಿ ಕೆಸಿ ರೊಡ್ ಉಸ್ತಾದರು ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಯಶಸ್ವಿಗಾಗಿ ಮೀಲಾದ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಚೇರ್ಮಾನ್:
ಮುಝಮ್ಮಿಲ್ ಕೋಲ್ಪೆ
ಕನ್ವೀನರ್: ಹನೀಫ್ ಮುಸ್ಲಿಯಾರ್
ವೈಸ್ ಚೇರ್ಮಾನ್: ಅಹ್ಮದ್ ಮುಸ್ಲಿಯಾರ್
ಫೈನಾನ್ಸ್ ಕಂಟ್ರೋಲರ್:
ಸವಾದ್ ಉಳ್ಳಾಲ ಇವರನ್ನು ನೇಮಿಸಲಾಯಿತು.
ಯೂಸುಫ್ ಬಜಗೋಳಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.







