janadhvani

Kannada Online News Paper

ಅಲ್ ಅಹ್ಸಾ ‘ಕೆಸಿಎಫ್’ ನಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ದಮ್ಮಾಮ್: ಕೆಸಿಎಫ್ ಅಲ್ ಅಹ್ಸಾ ಸೆಕ್ಟರ್ ವತಿಯಿಂದ ಹಮ್ಮಿಕೊಂಡ “ಕ್ರೀಡೋತ್ಸವ-25” ಕಾರ್ಯಕ್ರಮವನ್ನು ಅಲ್ ಗಾರಃ ಫುಟ್ಬಾಲ್ ಗ್ರೌಂಡ್ ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮವನ್ನು ಅಲ್ ಅಹ್ಸಾ ಸೆಕ್ಟರ್ ಪ್ರ.ಕಾರ್ಯದರ್ಶಿ ಉಸ್ತಾದ್ ಉಬೈದುಲ್ಲಾಹ್ ಉದ್ಘಾಟಿಸಿ, ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿ ಶುಭ ಹಾರೈಸಿದರು.
ಬಳಿಕ ಪುರುಷರ ವಿಭಾಗದ ಕ್ರಿಕೇಟ್‌ ಟೂರ್ನಮೆಂಟ್ ಮತ್ತು ಚಿಣ್ಣರ ಓಟ ಸ್ಪರ್ಧೆ ನಡೆಸಲಾಯಿತು.
ಕ್ರೀಡೆಯಲ್ಲಿ ವಿಜಯಿಗಳಾದ ಸ್ಪರ್ಧಿಗಳನ್ನು ಸೆಕ್ಟರ್ ವತಿಯಿಂದ ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸೆಕ್ಟರ್ ನಾಯಕರಾದ ಅಬ್ದುಲ್ಲಾ ಪುಲಾಬೆ, ಅಬೂಬಕ್ಕರ್ ಕಿಲ್ಲೂರು, ಅಸ್ರು ಬಜ್ಪೆ, ಇಕ್ಬಾಲ್ ಗುಲ್ವಾಡಿ, ಆರೀಸ್ ಕಾಜೂರು ಮತ್ತು ಅಶ್ರಫ್ ‌ಎಚ್.ಎಸ್ ಉಪಸ್ಥಿತಿಯಿದ್ದರು.
ಇಸ್ಹಾಕ್ ಫಜೀರ್ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು.