ನಿಮಿಷ ಪ್ರಿಯಾ ಆಕ್ಷನ್ ಕೌನ್ಸಿಲ್ ನ ಆಧಾರಸ್ತಂಭವಾದ ಅಡ್ವೊಕೇಟ್ ಸುಭಾಷ್ ಚಂದ್ರನ್ ಕೆ ಆರ್ ಬರೆಯುತ್ತಾರೆ……….
ಒಮ್ಮೆ ನಷ್ಟಗೊಂಡ ಜೀವನವನ್ನು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ; ಆದ್ದರಿಂದಲೇ ಉದ್ದೇಶಪೂರ್ವಕವಾಗಿ ಕೊಲೆಗೆ ಬಿಟ್ಟುಕೊಡುವುದನ್ನು ಯಾವತ್ತೂ ವಿರೋಧಿಸುತ್ತೇನೆ. ಮರಣದಂಡನೆಯು ಪ್ರಾಚೀನವಾದುದು ಮತ್ತು ಸುಸಂಸ್ಕೃತ ಸಮಾಜದಿಂದ ಅದನ್ನು ನಿರ್ಮೂಲನೆ ಮಾಡಬೇಕು ಎಂದು ನಂಬುತ್ತೇನೆ.
ಮಾನವರಾದರೆ ತಪ್ಪುಗಳು ಸಹಜ; ಮೃತ ದೇಹಗಳು ಮತ್ತು ಗರ್ಭಸ್ಥ ಶಿಶುಗಳು ಮಾತ್ರ ತಪ್ಪುಗಳನ್ನು ಮಾಡದಿರುವ ಮಾನವರು ಎಂದಲ್ಲವೇ?
ತಬ್ಬಿ ಹಿಡಿದುಕೊಂಡು ನಯವಾಗಿ ತಪ್ಪುಗಳನ್ನು ಎತ್ತಿ ತೋರಿಸಲು ಸಾಧ್ಯವಾಗಬೇಕು- ತಪ್ಪುಗಳನ್ನು ಸರಿಪಡಿಸಿ, ಸರಿಯಾದ ಹಾದಿಯಲ್ಲಿ ನಡೆಯಲು ಅವಕಾಶಗಳನ್ನು ಸೃಷ್ಟಿಸಬೇಕು.
ಎಲ್ಲಾ ಮಿತಿಗಳ ಹೊರತಾಗಿಯೂ, ಯೆಮೆನ್‌ನಲ್ಲಿನ ನ್ಯಾಯ ವ್ಯವಸ್ಥೆಯು ನಿಮಿಷಾ ಪ್ರಿಯಾಳನ್ನು ತಪ್ಪಿತಸ್ಥಳೆಂದು ಪರಿಗಣಿಸಿ ಮರಣದಂಡನೆ ವಿಧಿಸಿತ್ತು. “ದಿಯಾಧನ” ಎಂಬ ಶರಿಯಾ ಕಾನೂನಿನ ವಿಧಾನವನ್ನು ಬಳಸಿಕೊಂಡು ನಿಮಿಷಾಳನ್ನು ಗಲ್ಲು ಶಿಕ್ಷೆಯಿಂದ ರಕ್ಷಿಸುವುದಾಗಿತ್ತು ನಮ್ಮ ನಿರ್ಧಾರ.
ಕೊನೆಗೂ, ನಿಮಿಷಾ ಅವರ ಮರಣದಂಡನೆಯನ್ನು ರದ್ದುಪಡಿಸಲಾಗಿದೆ! ಭಾರತೀಯ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಶೈಖ್ ಕಾಂತಪುರಂ ಎ. ಪಿ. ಅಬೂಬಕರ್ ಮುಸ್ಲಿಯಾರರಿಗೆ ಹೃದಯಾಂತರಾಳದಿಂದ ಲಾಲ್ ಸಲಾಮ್.
ವಿಶ್ವಾಸಿ ಅಲ್ಲದ ನನಗೆ, ವಿಶ್ವಾಸಿಗಳ ಸುಲ್ತಾನರಿಂದ ಎಂದಿಗೂ ಅಪನಂಬಿಕೆಯನ್ನು ಎದುರಿಸದ ಹಗಲು ರಾತ್ರಿಗಳು. ಅಷ್ಟೊಂದು ಆತ್ಮವಿಶ್ವಾಸದಿಂದ ನಡೆಸಿದ ಅವರ ಮಧ್ಯಸ್ಥಿಕೆಗಳು. ತಮ್ಮ 94 ನೇ ಇಳಿ ವಯಸ್ಸಿನ ಆಯಾಸವು ಕಾಡದೆ, ಸಮರ್ಪಣಾ ಭಾವದಿಂದ ನಮ್ಮನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸಿದ ಮತ್ತು ಗುರಿಯತ್ತ ಕೈ ಹಿಡಿದೆಳೆದ ಉಸ್ತಾದರಿಗೂ ಮತ್ತು ಟೀಂ ಮರ್ಕಝ್ ಗೂ ಸಾವಿರ ಶುಭಾಶಯಗಳು.
ನಿಮಿಷಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಸವಾಲನ್ನು ಇನ್ನೂ ಜಯಿಸಬೇಕಾಗಿದೆ; ಸರ್ಕಾರ, ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಅದಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿವೆ – ಅದು ಶೀಘ್ರದಲ್ಲೇ ಸಾಧ್ಯವಾಗಲಿ ಎಂದು ಆಶಿಸೋಣ.
ನಮ್ಮೊಂದಿಗೆ ಸೇರಿ, ನಿಮಿಷಾ ಪರವಾಗಿ ನಿಂತಿದ್ದಕ್ಕಾಗಿ ತಾವು ಕೇಳಬೇಕಾಗಿ ಬಂದ ಎಲ್ಲಾ ಟೀಕೆಗಳಿಗೆ ನಾವು ತಮ್ಮಲ್ಲಿ ಕ್ಷಮೆಯಾಚಿಸುತ್ತಿದ್ದೇವೆ.
ಗೌರವಾನ್ವಿತ ಕಾಂತಪುರಂ ಜೊತೆಗೆ, ನಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತ ಸಾವಿರಾರು ಹಿತೈಷಿಗಳಿದ್ದಾರೆ; ನಮಗೆ ಅಪರಿಮಿತ ಬೆಂಬಲ ನೀಡಿದ ಮಾಧ್ಯಮ ಮತ್ತು ಪತ್ರಕರ್ತರಿದ್ದಾರೆ. ಸರ್ಕಾರ ಮತ್ತು ನ್ಯಾಯಾಲಯಗಳಿವೆ. ಎಲ್ಲರಿಗೂ ಹೃದಯಾಂತರಳಾದ ಸಾವಿರ ಧನ್ಯವಾದಗಳು.
Subhash Chandran K R
ಅವರ ಫೇಸ್‌ಬುಕ್ ಪುಟದಿಂದ
https://www.facebook.com/share/p/19kiHQTgrZ/







