janadhvani

Kannada Online News Paper

ಅಲ್ ಸಲಾಮ ಖಿದ್ಮಾ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಶರೀಫ್ ಹಾಜಿ ವೈಟ್ ಸ್ಟೋನ್ ಆಯ್ಕೆ

ಮಂಗಳೂರು: ಹಲವಾರು ಸಂಘ ಸಂಸ್ಥೆಗಳ ಜವಾಬ್ದಾರಿ ಹೊತ್ತು ವಿವಿಧ ಸೇವೆಗಳಿಗೆ ಮುನ್ನುಡಿ ಬರೆದ ಉದ್ಯಮಿ ಶರೀಫ್ ಹಾಜಿ ವೈಟ್ ಸ್ಟೋನ್ ಅಲ್ ಸಲಾಮ ಖಿದ್ಮಾ ಸಂಸ್ಥೆಯ ಕಾರ್ಯಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಿವೃತ್ತ ಡಿಸಿಪಿ ಜಿ ಏ ಬಾವಾರವರು ತಿಳಿಸಿದ್ದಾರೆ.

ವಿವಿಧ ಸಾಮಾಜಿಕ ಸೇವೆಗಳಿಗಾಗಿ ಹುಟ್ಟಿಕೊಂಡ ನೂತನ ಸಂಸ್ಥೆಯು ಡ್ರಗ್ಸ್ ಮುಕ್ತ ಭಾಗವಾಗಿ ಹೆಚ್ಚು ಕಾರ್ಯ ನಿರ್ವಹಿಸಲಿದೆ. ಇದರ ನೂತನ ಕಚೇರಿಯನ್ನು ಆಗಸ್ಟ್ 9ರಂದು ತೆರೆಯಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.