janadhvani

Kannada Online News Paper

ಮಂಗಳೂರು ಹತ್ಯೆ: ವಕ್ಫ್ ಸಚಿವರೊಂದಿಗೆ ತುರ್ತು ಸಭೆ ನಡೆಸಿದ ಮೌಲಾನಾ ಶಾಫಿ ಸಅದಿ

ಶೀಘ್ರ ಕ್ರಮಕ್ಕಾಗಿ ನಾಳೆ ಬೆಳಿಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು , ಪೋಲೀಸ್ ಮಹಾ ನಿರ್ದೇಶಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ಬೆಂಗಳೂರು: ಮಂಗಳೂರಿನಲ್ಲಿ ಅಮಾಯಕ ಅಬ್ದುಲ್ ರಹ್ಮಾನ್ ಹತ್ಯೆಯ ಕುರಿತಾಗಿ ಸಮುದಾಯದ ಆಕ್ರೋಶ ಮತ್ತು ಗೊಂದಲಗಳ ಬಗ್ಗೆ ಅಲ್ಪಸಂಖ್ಯಾತ ಇಲಾಖೆ ಮತ್ತು ವಕ್ಫ್ ಸಚಿವರಾದ B.Z Zameer Ahmed Khan ಹಾಗು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾಗಿ ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಇದರ ಉಪಾಧ್ಯಕ್ಷರಾದ ಮೌಲಾನಾ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ತಿಳಿಸಿದ್ದಾರೆ.

ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯ ಮೂಲಕ ಇದರ ಬಗ್ಗೆ ಮಾಹಿತಿ ನೀಡಿರುವ ಶಾಫಿ ಸಅದಿ ಅವರು, ಮುಖ್ಯವಾಗಿ ಕೆಲವು ಬೇಡಿಕೆಗಳನ್ನು ಮಾನ್ಯ ವಕ್ಫ್ ಸಚಿವರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅವರ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.

ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು

1. ತಕ್ಷಣ ಸರ್ಕಾರದ ಭಾಗವಾಗಿ ಪ್ರತಿನಿಧಿಸುವವರು ಮಂಗಳೂರು ಭೇಟಿ ನೀಡಬೇಕು.
2. ಕನಿಷ್ಠ 25ಲಕ್ಷ ಪರಿಹಾರ ಘೋಷಣೆ ನಡೆಯಬೇಕು.
3. ಘಟನೆಗೆ ಕಾರಣವಾದ ಕೋಮುದ್ವೇಷ ಭಾಷಣದ ಆರೋಪಿಗಳನ್ನು ಬಂಧಿಸಬೇಕು.
4. Anti ಕಮ್ಯೂನಲ್ ಫೋರ್ಸ್ ತಕ್ಷಣ ಕಾರ್ಯಾಚರಣೆ ಆರಂಭಿಸಿ ಕರಾವಳಿಯ ಈ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
5. ಘಟನೆಗೆ ಕಾರಣವಾದ ಆರೋಪಿಗಳ ಮೇಲೆ ಕಠಿನ ಕಾನೂನಿನ ಅಡಿಯಲ್ಲಿ ಬಂಧಿಸಿ ಶಿಕ್ಷೆ ನೀಡಲು ಕಾರಣವಾಗುವ ಹೆಜ್ಜೆ ಸರ್ಕಾರ ಮುಂದಡಿಯಿಡಬೇಕು.
6. ಕರಾವಳಿಯ ಈ ಘಟನೆಗೆ ಪೋಲೀಸ್ ಇಲಾಖೆಯ ನಿರ್ಲಕ್ಷ್ಯದ ಸಮಗ್ರ ತನಿಖೆ ನಡೆಸಿ , ಕರಾವಳಿ ಪೋಲೀಸ್ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತಕ್ಷಣ ತರಬೇಕು.

ಸನ್ಮಾನ್ಯ ವಕ್ಫ್ ಸಚಿವರು ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳು ನೇರವಾಗಿ ಮುಖ್ಯಮಂತ್ರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಶೀಘ್ರ ಕ್ರಮಕ್ಕಾಗಿ ನಾಳೆ ಬೆಳಿಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು , ಪೋಲೀಸ್ ಮಹಾ ನಿರ್ದೇಶಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಸಭೆಯಲ್ಲಿ ಮಾಜಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಪಾಷಾ ಹಾಜರಿದ್ದರು.

ಅಬ್ದುಲ್ ರಹ್ಮಾನ್ ದಫನ ಹಾಗೂ ಅಂತಿಮ ಯಾತ್ರೆಯಲ್ಲಿ ಶಾಂತಿ ಕಾಪಾಡಿಕೊಂಡ ಸಮುದಾಯದ ಬಾಂಧವರ ತಾಳ್ಮೆಯನ್ನು ಶಾಫಿ ಸಅದಿಯವರು ಅಭಿನಂದಿಸಿದ್ದಾರೆ.

https://www.facebook.com/share/p/19JR66xZYs/