janadhvani

Kannada Online News Paper

ಹತ್ಯೆಗೊಳಗಾದ ಅಬ್ದುರ್ರಹ್ಮಾನ್ ಕುಟುಂಬಕ್ಕೆ 1 ಕೋಟಿ ಪರಿಹಾರ- ಜಿಲ್ಲಾಧಿಕಾರಿಗಳಿಗೆ ಮನವಿ

ಧ್ವೇಷ ಭಾಷಣ ಮಾಡಿದ ಪ್ರತೀಯೋರ್ವರ ಮೇಲೂ ಗಂಭೀರ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ಎಸ್ಸೆಸ್ಸೆಫ್ ಒತ್ತಾಯಿಸಿದೆ

ಕೊಳತ್ತಮಜಲು ಅಬ್ದುರ್ರಹ್ಮಾನ್ ಹಂತಕರು ಮತ್ತು ಅವರನ್ನು ಈ ಕೃತ್ಯಕ್ಕೆ ಪ್ರಚೋಧಿಸಿದವರನ್ನು ಕೂಡಲೇ ಬಂಧಿಸಬೇಕು, ಹತ್ಯೆಗೊಳಗಾದ ಅಬ್ದುರ್ರಹ್ಮಾನ್ ಕುಟುಂಬಕ್ಕೆ 1 ಕೋಟಿ ಪರಿಹಾರ ಒದಗಿಸಬೇಕು, ಹಲ್ಲೆಗೊಳಗಾದ ಖಲಂದರ್ ಶಾಫಿಯವರ ಚಿಕಿತ್ಸೆಯ ವೆಚ್ಚವನ್ನು ಸರಕಾರ ಭರಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ಎಸ್.ಎಸ್.ಎಫ್ ಜಿಲ್ಲಾ ಸಮಿತಿ(ವೆಸ್ಟ್) ವತಿಯಿಂದ ಮನವಿ ನೀಡಲಾಯಿತು.

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ನಿರಂತರ ದ್ವೇಷ ಭಾಷಣ, ಪ್ರತಿಕಾರಕ್ಕೆ ಪ್ರಚೋಧನೆ ಮಾಡಿದ ಕಾರಣದಿಂದಲೇ ಈ ಕೊಲೆ ನಡೆದಿದೆ, ಧ್ವೇಷ ಭಾಷಣ ಮಾಡಿದ ಪ್ರತೀಯೋರ್ವರ ಮೇಲೂ ಗಂಭೀರ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ಎಸ್ಸೆಸ್ಸೆಫ್ ಒತ್ತಾಯಿಸಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು, ಬಂಧನ ವಿಳಂಬವಾದರೆ ಜಿಲ್ಲಾಧ್ಯಂತ ಪ್ರತಿಭಟನಾ ಹೋರಾಟಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ಅದರ ಅಧೀನ ಸಂಘಟನೆಗಳು ಕರೆ ನೀಡಲಿದೆಯೆಂದು ಈ ಸಂಧರ್ಭದಲ್ಲಿ ತಿಳಿಸಲಾಯಿತು.