janadhvani

Kannada Online News Paper

ಕೊಳತ್ತಮಜಲು ಅಮಾಯಕ ಯುವಕನ ಹ*ತ್ಯೆ: ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ- ಮುಸ್ಲಿಮ್ ಒಕ್ಕೂಟ

ಹತ್ಯೆದಾರರು ಈ ಕೊಲೆಯನ್ನು ಮತೀಯ ವಿದ್ವೇಷದಿಂದ ಕೊಲೆ ಮಾಡಿದ್ದಾರೆ

ಮಂಗಳೂರು: ಬಂಟ್ವಾಳದ ಕೊಳತ್ತಮಜಲು ಅಬ್ದುಲ್ ರಹಿಮಾನ್ ಎಂಬ ಯುವಕನನ್ನು ಇಂದು ಸಂಘೀ‌ ದುಷ್ಕರ್ಮಿಗಳು ವ್ಯವಸ್ಥಿತ, ಪೂರ್ವ ಯೋಜಿತವಾಗಿ ಹತ್ಯೆ ಮಾಡಿದ್ದು, ಅಮಾಯಕ ವ್ಯಕ್ತಿಯ ಹತ್ಯೆಯನ್ನು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಹತ್ಯೆಯ ಸಂಚುದಾರರು ಈ ಹಿಂದೆಯೇ ಬಹಿರಂಗವಾಗಿ ಘೋಷಿಸಿದ್ದು ಪೊಲೀಸರು ಕೂಡಲೇ ಹತ್ಯೆಯಲ್ಲಿ ಭಾಗಿಯಾದ ನೇರ ಮತ್ತು ಪರೋಕ್ಷ ಕೃತ್ಯದಾರರನ್ನು ಬಂಧಿಸಬೇಕಿದೆ. ಹತ್ಯೆದಾರರು ಈ ಕೊಲೆಯನ್ನು ಮತೀಯ ವಿದ್ವೇಷದಿಂದ ಕೊಲೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿ ಯಾರಿಂದಲೂ ದ್ವೇಷಕ್ಕೆ ಗುರಿಯಾಗಿದ್ದ ವ್ಯಕ್ತಿ ಅಲ್ಲ. ಮರಳು ಸಾಗಣಿಕೆ ಪೂರೈಸಲು ಬರ ಮಾಡಿಕೊಂಡು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳ ಇಂತಹ ನಡೆ ಖಂಡನೀಯ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್ ( ಮಾಜಿ ಮೇಯರ್) ಪತ್ರಿಕಾ ಪ್ರಕಟಣೆ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ.