.ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಸೆಸ್ಸೆಫ್ ಇದು 1973 ಎಪ್ರಿಲ್ 29 ಕೇರಳದ ಪಟ್ಟಿಕ್ಕಾಡ್ ನಲ್ಲಿ ರೂಪೀಕೃತಗೊಂಡಿತು. ಇದರ ಧ್ವಜ ದಿನ ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈಎಸ್ ಎಸ್ಸೆಸ್ಸೆಫ್ ಚೆನ್ನಾವರ ಶಾಖಾ ವತಿಯಿಂದ ಚೆನ್ನಾವರ ಮಸೀದಿ ಬಳಿ ನಡೆಯಿತು. ಎಸ್ಸೆಸ್ಸೆಫ್,ಎಸ್ ವೈಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಚೆನ್ನಾವರ ಶಾಖೆಯ ಮೂರೂ ಸಂಘಟನೆಯ ಸ್ಥಾಪಕಾಧ್ಯಕ್ಷ ರಾಗಿದ್ದ ಮರ್ಹೂಮ್ ಅಬ್ದುಲ್ ಕರೀಂ ಹಾಜಿ ರವರ ಕಬರ್ ಝಿಯಾರತ್ ನೊಂದಿಗೆ ಚಾಲನೆ ನೀಡಲಾಯಿತು.
ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ರವರು ಧ್ವಜಾರೋಹಣ ನೆರವೇರಿಸಿದರು. ಎಸ್ಸೆಸ್ಸೆಫ್ ನ ಹಿರೀಯ ನಾಯಕ ಹಂಝ ಮದನಿ ಮಿತ್ತೂರು, ಎಸ್ ವೈಎಸ್ ಕೋಶಾಧಿಕಾರಿ, ನಸೀರ್ ನಿಝಾಮಿ ರವರು ಸಂದೇಶ ಭಾಷಣ ಮಾಡಿದರು. ರೈನ್ ಬೋ ವಿದ್ಯಾರ್ಥಿಗಳ ರಾಲಿ , ಸಿಹಿತಿಂಡಿ ವಿತರಿಸಲಾಯಿತು.
ಎಸ್ ವೈಎಸ್ ಅಧ್ಯಕ್ಷ ಮುಹಮ್ಮದ್ ಕುಂಡಡ್ಕ, ಮುತ್ತಲಿಬ್ ಹಾಜಿ, ಅಬ್ದುಲ್ ಸತ್ತಾರ್ , ಅಬ್ದುಲ್ ರಹ್ಮಾನ್ ಮುಕ್ಕೂರು, ಅಬ್ದುಲ್ಲ, ಎಸ್ ವೈಎಸ್ ಪುತ್ತೂರು ಝೋನ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಚೆನ್ನಾರ್, ಎಸ್ಸೆಸ್ಸೆಫ್ ಶಾಖೆಯ ಹಿರಿಯ ನಾಯಕರಾದ ಜಮಾಲುದ್ದೀನ್ ಎಪಿ, ಖಾಸಿಮ್ ಮುಕ್ಕೂರು, ಅಹ್ಮದ್ ಕುಂಡಡ್ಕ, ಸಿದ್ದೀಕ್ ಚೆನ್ನಾರ್, ಯೂಸುಫ್ ಬಿಸ್ಮಿಲ್ಲ, ಅಮೀನ್ ಮಿಸ್ಬಾಹಿ, ಎಸ್ಸೆಸ್ಸೆಫ್ ಅಧ್ಯಕ್ಷ ವಫೀಕ್ ಅಹ್ಮದ್ , ಅಬ್ದುಲ್ ಜಲೀಲ್ ಮಾಸ್ತಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಹಾಫಿಳ್ ಮಶ್ಹೂದ್ ಸ್ವಾಗತಿಸಿ , ಹಾಫಿಳ್ ಮುಹಮ್ಮದ್ ತ್ವಾಹಿರ್ ವಂದಿಸಿದರು.







