ಪಹಲ್ಗಾಮ್ ಉಗ್ರರ ದಾಳಿಯ ನಂತರ ದಾಳಿಕೋರರಿಗೆ ಪಾಕ್ ನಂಟಿದೆ ಎಂದು ಬಲವಾಗಿ ನಂಬಿರುವ ಭಾರತ,ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಭದ್ರತಾ ಸಂಬಂಧಿತ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
- ಭಾರತ ಮತ್ತು ಪಾಕಿಸ್ತಾನ ನಡುವಿನ ಅಟ್ಟಾರಿ ಗಡಿ ಚೆಕ್ ಪೋಸ್ಟ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ತೀರ್ಮಾನಿಸಲಾಗಿದೆ. ಇದು ಗಡಿ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತದೆ.
- ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚಲು ನಿರ್ಧಾರ.
- ಭಾರತವು ಸಿಂಧೂ ನದಿಯ ನೀರಿನ ಹಂಚಿಕೆ ಕುರಿತ ಪಾಕಿಸ್ತಾನ ಜತೆಗಿನ ಒಪ್ಪಂದವನ್ನು ಅಮಾನತು ಮಾಡಿದೆ. ಇದರಿಂದ ಪಾಕಿಸ್ತಾನಕ್ಕೆ ನೀರಿನ ಸರಬರಾಜಿನಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.
- ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ರಾಜತಾಂತ್ರಿಕರು 48 ಗಂಟೆಗಳ ಒಳಗೆ ದೇಶ ತೊರೆಯಬೇಕು ಎಂಬ ಆದೇಶ ಜಾರಿಗೆ ಬಂದಿದೆ.
- ಪಾಕಿಸ್ತಾನಿ ನಾಗರಿಕರಿಗೆ ಹೊಸ ಭಾರತೀಯ ವೀಸಾಗಳನ್ನು ನೀಡುವುದಿಲ್ಲ. ಈಗಾಗಲೇ ನೀಡಲಾದ ವೀಸಾಗಳನ್ನೂ ರದ್ದುಗೊಳಿಸಲಾಗಿದೆ.
ಪಾಕಿಸ್ತಾನ ಹೈಕಮಿಷನ್ ನಲ್ಲಿ ಕೆಲಸಮಾಡುತ್ತಿರುವ ರಕ್ಷಣಾ, ನೌಕಾ ಮತ್ತು ವಾಯುಪಡೆಯ ಸಲಹೆಗಾರರನ್ನು “ಪರ್ಸನಾ ನಾನ್ ಗ್ರಾಟಾ” ಎಂದು ಘೋಷಿಸಲಾಗಿದೆ. ಅವರು ಒಂದು ವಾರದೊಳಗೆ ಭಾರತವನ್ನು ತೊರೆಯಬೇಕಾಗಿದೆ.







