ಎಸ್‌ವೈಎಸ್ ದ.ಕ ಜಿಲ್ಲಾ ವೆಸ್ಟ್ ಸಮಿತಿಯಿಂದ ಜಿಲ್ಲಾ ವಾರ್ಷಿಕ ಕೌನ್ಸಿಲ್ ಹಾಗೂ ಜಿಲ್ಲಾ ಕ್ಯಾಂಪ್ ಎಸ್.ವೈ.ಎಸ್ ಜಿಲ್ಲಾಧ್ಯಕ್ಷರಾದ ವಿ.ಯು.ಇಸ್ಹಾಖ್ ಝುಹ್ರಿ ಕಾನೆಕೆರೆರವರ ಅಧ್ಯಕ್ಷತೆಯಲ್ಲಿ ಎಪ್ರಿಲ್ 8 ಮಂಗಳವಾರ ಮಧ್ಯಾಹ್ನ 3:30 ಗಂಟೆಗೆ ತಾಜುಲ್ ಫುಖಹಾಅ್ ನಗರ ಮರಿಕ್ಕಳದಲ್ಲಿ ನಡೆಯಲಿದೆ.
ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗು ಸಭೆಯನ್ನು ಉದ್ಘಾಟಿಸಲಿದ್ದು, ತ್ವಾಹಿರ್ ಸಖಾಫಿ ಮಂಜೇರಿ ತರಗತಿಯನ್ನು ನಡೆಸಲಿದ್ದಾರೆ. ಕ್ಯಾಂಪ್‌ನಲ್ಲಿ ದ.ಕ ಜಿಲ್ಲಾ ವ್ಯಾಪ್ತಿಯ ಝೋನ್, ಸರ್ಕಲ್, ಯೂನಿಟ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.