janadhvani

Kannada Online News Paper

ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ ಉಸ್ತಾದ್ ‘ಹೋಲಿ ಖುರ್‌ಆನ್‌ ಅವಾರ್ಡ್’ ಗೆ ಆಯ್ಕೆ

ಸುನ್ನೀ ಕರ್ನಾಟಕಕ್ಕೆ ಇವರು ನೀಡಿದ ಅನನ್ಯ ಸಾಹಿತ್ಯ ಸೇವೆ ಹಾಗೂ ಇಸ್ಲಾಮೀ ಜ್ಞಾನ ದೀವಿಗೆಯ ವಿವಿಧ ಮಜಲುಗಳಲ್ಲಿ ಆಳ ಅಧ್ಯಯನ, ವಿಶೇಷವಾಗಿ ಇಸ್ಲಾಮಿಕ್ ತತ್ವ ಮತ್ತು ಕರ್ಮ ಶಾಸ್ತ್ರದಲ್ಲಿ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿದೆ.

ಕನ್ನಡದ ನೆಲದಲ್ಲಿ ಧಾರ್ಮಿಕ ಸೇವಾ ರಂಗದಲ್ಲಿ
ಅತ್ಯಪೂರ್ವ ಸಾಧನೆಗೈದವರಿಗಾಗಿ ಮೈಮನ್ ಅಕಾಡೆಮಿ ಹಾಗೂ ವಿಸ್ಡಮ್ ವರ್ಲ್ಡ್ ಪ್ರೀ ಸ್ಕೂಲ್ ನೆಟ್ವರ್ಕ್ ಕರ್ನಾಟಕ ನೀಡುತ್ತಿರುವ ಹೋಲಿ ಖುರ್ಆನ್ ಪುರಸ್ಕಾರಕ್ಕೆ ತೋಕೆ ಸಖಾಫಿ ಉಸ್ತಾದ್ ಆಯ್ಕೆಯಾಗಿದ್ದಾರೆ.

ಖುರ್‌ಆನ್‌ನ ಮೊದಲ ಕಾಂಡದ ವ್ಯಾಖ್ಯಾನ ಸಹಿತ ಸುನ್ನೀ ಕರ್ನಾಟಕಕ್ಕೆ ಇವರು ನೀಡಿದ ಅನನ್ಯ ಸಾಹಿತ್ಯ ಸೇವೆ ಹಾಗೂ ಇಸ್ಲಾಮೀ ಜ್ಞಾನ ದೀವಿಗೆಯ ವಿವಿಧ ಮಜಲುಗಳಲ್ಲಿ ಆಳ ಅಧ್ಯಯನ, ವಿಶೇಷವಾಗಿ ಇಸ್ಲಾಮಿಕ್ ತತ್ವ ಮತ್ತು ಕರ್ಮ ಶಾಸ್ತ್ರದಲ್ಲಿ ವಿಶಿಷ್ಟ ಸಾಧನೆಯನ್ನು
ಪರಿಗಣಿಸಿ ಈ ಆಯ್ಕೆ ನಡೆದಿದೆ.

ಎಪ್ರಿಲ್ 8 ರಂದು ಮಂಗಳೂರು ‘ಟೌನ್ ಹಾಲ್’ ನಲ್ಲಿ ನಡೆಯುವ ಮೈಮನ್ ಅಕಾಡೆಮಿ ಹಾಗೂ ವಿಸ್ಡಮ್ ವರ್ಲ್ಡ್ ಪ್ರೀ ಸ್ಕೂಲ್ ನೆಟ್ವರ್ಕ್ ಕರ್ನಾಟಕ ಇದರ 7 ನೇ ವಾರ್ಷಿಕ ಹಾಗೂ ಐದನೇ ಗ್ರಾಜ್ಯುವೇಶನ್ ಪ್ರೋಗ್ರಾಂ ಪ್ರಯುಕ್ತ ಹಮ್ಮಿಕೊಳ್ಳಲಾದ ಸಯ್ಯಿದತ್ ನಫೀಸತುಲ್ ಮಿಸ್ರಿಯಾ ಕೊಮೆಮೊರೇಶನ್ ಕಾನ್ಫರೆನ್ಸ್ ನಲ್ಲಿ ಈ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು.

ಚೆಯರ್ಮಾನ್ ಸಯ್ಯಿದ್ ಶರಫುದ್ದೀನ್ ತಂಙಳ್ ಫರೀದ್ ನಗರ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ
ಮೋಹಕ ವಾಗ್ಝರಣಿಯ ಅನುಗ್ರಹೀತ ಉಪನ್ಯಾಸಕ ಅನಸ್ ಅಮಾನಿ ಪುಷ್ಪಗಿರಿ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಚ್.ಐ ಅಬೂ ಸುಫ್ಯಾನ್ ಮದನಿ, ಕರ್ನಾಟಕ ವಕ್ಪ್ ಬೋರ್ಡ್ ಇದರ ನಿಕಟಪೂರ್ವ ಅಧ್ಯಕ್ಷರಾದ ಮೌಲಾನಾ ಶಾಫಿ ಸ‌ಅದಿ ಭಾಗವಹಿಸಲಿದ್ದಾರೆಂದು ಮ್ಯಾನೇಜಿಂಗ್ ಡೈರೆಕ್ಟರ್: ಎಂ.ಎ ಸಿದ್ದೀಕ್ ಮದನಿ ಮೆದು ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.