janadhvani

Kannada Online News Paper

ಸೌಹಾರ್ದ ಬಯಸುವ ಯು ಟಿ ಕೆ ಮಾತು ಅರ್ಥಪೂರ್ಣ- ಅನರ್ಥ ವಿವರಣೆ ನೀಡಿದ ಕಾಟಿಪಳ್ಳರಿಗೆ ತಿರುಗೇಟು

ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಪೇಚಿಗೆ ಸಿಲುಕಿಸುವುದು ಹಾಗೂ ಹಿಂದೂ ವಿರೋಧಿಯೆಂದು ಬಿಂಬಿಸಿ ತಮ್ಮ ರಾಜಕೀಯ ಬೆಳೆಸುವುದು ಅವರ ಉದ್ದೇಶವಾಗಿರುತ್ತದೆ. ಆ ಉದ್ದೇಶ ಇಟ್ಟುಕೊಂಡೇ ಪೂರ್ವಯೋಜಿತವಾಗಿ ಅವರು ತಮ್ಮ ಬಾಡಿಗೆ ಭಾಷಣಗಾರರಿಗೆ ಹಣ ಕೊಟ್ಟು ಪ್ರಚೋದನ ಕಾರಿ ಹೇಳಿಕೆ ಕೊಡಿಸುತ್ತಾರೆ,

ಮಂಗಳೂರು: ಚಕ್ರವರ್ತಿ ಸೂಲಿಬೆಲೆಯ ಪ್ರಚೋದನಕಾರಿ ಭಾಷಣದ ಬಗ್ಗೆ ಸ್ಪೀಕರ್ ಯು ಟಿ ಖಾದರ್ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಅದನ್ನು ಅನರ್ಥವಾಗಿ ವಿವರಿಸಿ ಟಾಂಗ್ ಕೊಟ್ಟ ಮುನೀರ್ ಕಾಟಿಪಳ್ಳರಿಗೆ ಜನಸಾಮಾನ್ಯರು ತಿರುಗೇಟುನೀಡಿದ್ದಾರೆ.

ಯು. ಟಿ. ಕಾದರ್ ರವರ ನೀತಿ ಬಹಳ ಸಮರ್ಥನೀಯ ಮತ್ತು ಬಲವಂತವಾದುದು. ಕೋಮು ಪ್ರಚೋದಕ ಮಾತು ಹೇಳುವವರು ಎಲ್ಲಾ ಗೊತ್ತಿದ್ದು ಕೊಂಡೇ ಹೇಳಿಕೆ ಕೊಡುವುದು. ಅವರಿಗೆ ಒಟ್ಟಾರೆ ಮುಸ್ಲಿಮರನ್ನು ಕೆಣಕಿ ಬೀದಿಗಿಳಿಸಬೇಕು‌. ಮುಸ್ಲಿಮರು ಕೆರಳುವುದು ಅವರ ರಾಜಕೀಯ ಬೆಳವಣಿಗೆಗೆ ಅಗತ್ಯ. ಆದ್ದರಿಂದ ಮುಸ್ಲಿಮರ ಕೆರಳಿಕೆ ಅವರ ಉದ್ದೇಶವನ್ನು ಸಫಲಗೊಳಿಸುತ್ತದೆ. ಆದ್ದರಿಂದ ನೆಗ್ಲೆಟ್ ಮಾಡಿ ಮೌನ ವಹಿಸುವುದೇ ಅವರನ್ನು ವಿಫಲಗೊಳಿಸುವ ಸುಲಭದ ದಾರಿ. ಈ ದಾರಿಯನ್ನು ಕಂಡು ಕೊಂಡ ಬುದ್ಧಿವಂತಿಕೆ ಯು. ಟಿ. ಕಾದರ್ ರವರಲ್ಲಿ ಅಪಾರವಿದೆ.

ಕೇಸು ದಾಖಲಿಸಿದರೆ ಗಲಾಟೆ ಮಾಡ್ತಾರೆ, ಕೋರ್ಟಿನಿಂದ ಬಿಡುಗಡೆ ಮಾಡಿಕೊಂಡು ಬಂದು ಅದನ್ನೇ ವಿಜೃಂಭಣೆ ಮಾಡುತ್ತಾರೆ. ಒಟ್ಟಾರೆ ಗೊಂದಲವೆಬ್ಬಿಸಿ ಶೈನ್ ಆಗುವುದು ಕೋಮುವಾದಿಗಳ ಉದ್ದೇಶವಾಗಿದೆ. ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಪೇಚಿಗೆ ಸಿಲುಕಿಸುವುದು ಹಾಗೂ ಹಿಂದೂ ವಿರೋಧಿಯೆಂದು ಬಿಂಬಿಸಿ ತಮ್ಮ ರಾಜಕೀಯ ಬೆಳೆಸುವುದು ಅವರ ಉದ್ದೇಶವಾಗಿರುತ್ತದೆ. ಆ ಉದ್ದೇಶ ಇಟ್ಟುಕೊಂಡೇ ಪೂರ್ವಯೋಜಿತವಾಗಿ ಅವರು ತಮ್ಮ ಬಾಡಿಗೆ ಭಾಷಣಗಾರರಿಗೆ ಹಣ ಕೊಟ್ಟು ಪ್ರಚೋದನ ಕಾರಿ ಹೇಳಿಕೆ ಕೊಡಿಸುತ್ತಾರೆ, ಕೇಸು ಮಾಡಬೇಕು, ಕೇಸಿನಿಂದ ಹೊರಬಂದು ಹೀರೋ ಆಗಬೇಕು ಎಂಬುದೇ ಅವರ ಉದ್ದೇಶ. ಆ ಉದ್ದೇಶವನ್ನು ವಿಫಲಗೊಳಿಸುವ ಪ್ರಬಲ ಅಸ್ತ್ರವೇ ನೆಗ್ಲೆಟ್. ಇದನ್ನು ರಾಜಕೀಯ ಮುತ್ಸದ್ಧಿ ಯು. ಟಿ. ಕಾದರ್ ರವರು ಅರ್ಥ ಮಾಡಿಕೊಂಡಿದ್ದಾರೆ. ಈ ಮುತ್ಸದ್ಧಿತನ ಮುನೀರ್ ಕಾಟಿಪಳ್ಳ ರಂತಹವರಲ್ಲಿ ಇರುವುದಿಲ್ಲ. ಅವರು ಒಂದೇ ಏಟಿಗೆ ಎರಡು ಹಕ್ಕಿ ಎಂಬ ಧೋರಣೆಯವರು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಹಾಗೂ ಕಾಂಗ್ರೆಸ್ ನ್ನು, ವಿಶೇಷತಃ ಯು. ಟಿ. ಕಾದರ್ ರವರನ್ನು ಟಾರ್ಗೆಟ್ ಮಾಡಲು ಇದನ್ನು ಬಳಸಿಕೊಳ್ಳುತ್ತಾರೆ.

ಕೋಮು ಪ್ರಚೋದಕ ಹೇಳಿಕೆಗಳನ್ನು ಕೋಮುವಾದಿಗಳು ತಮ್ಮ ಬಾಡಿಗೆ ಬಡಾಯಿಗಳಿಂದ ಕೊಡಿಸುವುದು ಅವರ ಟಾರ್ಗೆಟ್ಟಾದರೆ ಅದನ್ನು ಪ್ರತಿಭಟಿಸುವ ಮುನೀರ್ ಕಾಟಿಪಳ್ಳರಂತಹವರದ್ದು ಇನ್ನೊಂದು ಟಾರ್ಗೆಟ್. ಅವರಿಗೂ ಇಂತಹ ಕೋಮು ಪ್ರಚೋದಕ ಹೇಳಿಕೆಗಳು ಬೇಕು. ಒಟ್ಟಾರೆ ಎರಡೂ ಕಡೆಯವರ ಈ ಟಾರ್ಗೆಂಟ್ ನಿಂದಾಗಿ ಅಡಕತ್ತರಿಯಲ್ಲಿ ಸಿಲುಕಿಕೊಳ್ಳುವ ದುರವಸ್ಥೆ ಮುಸ್ಲಿಮ್ ಸಮುದಾಯದ್ದು.

ಮುಸ್ಲಿಮ್ ಸಮುದಾಯ ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಾಡಿಗೆ ಭಾಷಣಗಾರರು ಏನೇನೋ ಬೊಗಳ್ತಾ ಇರ್ತಾರೆ. ಅದಕ್ಕೆಲ್ಲ ವೈಲೆಂಟಾಗುತ್ತಾ ಸಮಯ ವ್ಯರ್ಥಮಾಡುವ ಪೆದ್ದುತನವನ್ನು ಮುಸ್ಲಿಮ್ ಸಮುದಾಯ ಮಾಡಬಾರದು. ಸಂಪೂರ್ಣ ನಿರ್ಲಕ್ಷ್ಯ ವಹಿಸಬೇಕು. ಯು. ಟಿ. ಕಾದರ್ ರವರು ತೋರುತ್ತಿರುವ ಈ ನೀತಿಯನ್ನು ಮುಸ್ಲಿಮ್ ಸಮುದಾಯ ತೋರಿದರೆ ಕೋಮು ಪ್ರಚೋದಕ ಹೇಳಿಕೆಗಳು ತಾನಾಗಿಯೇ ನಿಂತು ಬಿಡುತ್ತವೆ. ನಾವು ಎಷ್ಟೇ ಕೆಣಕಿದರೂ ಮುಸ್ಲಿಮರು ಕ್ಯಾರೇ ಮಾಡುವುದಿಲ್ಲ ಎಂಬ ಅವಸ್ಥೆ ನಿರ್ಮಾಣವಾದರೆ ಪ್ರಚೋದನಕಾರಿ ಹೇಳಿಕೆಗಳನ್ನು ಅವರೇ ನಿಲ್ಲಿಸುತ್ತಾರೆ.