ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ವಾರ್ಷಿಕ ಮಹಾಸಭೆಯು ಝೋನ್ ಅಧ್ಯಕ್ಷರಾದ ಮುಫತ್ತಿಶ್ ಇಸ್ಮಾಈಲ್ ಸಅದಿ ಉರುಮಣೆ ಅವರ ಅಧ್ಯಕ್ಷತೆಯಲ್ಲಿ ತಿಬ್ಲೆಪದವು ರಹ್ಮಾನಿಯಾ ಮದ್ರಸ ಹಾಲ್ ನಲ್ಲಿ ಜರುಗಿತು.
ಸಯ್ಯಿದ್ ಶರಫುದ್ದೀನ್ ತಂಙಳ್ ಫರೀದ್‌ನಗರ ದುಆ ನೆರವೇರಿಸಿದರು. ರಾಜ್ಯ ಮುಶಾವರ ಸದಸ್ಯರಾದ ಉಸ್ಮಾನ್ ಸಅದಿ ಪಟ್ಟೋರಿ ಸಭೆಯನ್ನು ಉದ್ಘಾಟಿಸಿದರು. ವೀಕ್ಷಕರಾಗಿ ಆಗಮಿಸಿದ ರಾಜ್ಯ ಮುಶಾವರ ಸದಸ್ಯರಾದ ಶಿಹಾಬ್ ಸಖಾಫಿ ಉಳ್ಳಾಲ ಜಂಇಯ್ಯತುಲ್ ಉಲಮಾ ಸದಸ್ಯತನದ ಅರ್ಹತೆಯ ಬಗ್ಗೆ ವಿವರಿಸಿದರು.
ಸಭೆಯಲ್ಲಿ ವಾರ್ಷಿಕ ವರದಿ ಹಾಗು ಲೆಕ್ಕಪತ್ರವನ್ನು ಮಂಡಿಸಿ ಅಂಗೀಕರಿಸಲಾಯಿತು. ಬಳಿಕ ನೂತನ ಸಮಿತಿ ರಚನಾ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಸಯ್ಯಿದ್ ಶರಫುದ್ದೀನ್ ತಂಙಳ್ ಫರೀದ್‌ನಗರ, ಪ್ರಧಾನ ಕಾರ್ಯದರ್ಶಿ – ಅಬ್ದುರ್ರಾಝಿಕ್ ಸಅದಿ ಪರಿಯಕ್ಕಳ, ಕೋಶಾಧಿಕಾರಿ- ಅಬೂಸ್ವಾಲಿಹ್ ಸಖಾಫಿ ಬೆಳ್ಮ, ಉಪಾಧ್ಯಕ್ಷರಾಗಿ ತೌಸೀಫ್ ಸಅದಿ ಹರೇಕಳ, ಇಬ್ರಾಹಿಂ ಅಹ್ಸನಿ ಮಂಜನಾಡಿ, ಕಾರ್ಯದರ್ಶಿಗಳಾಗಿ ಫಾರೂಕ್ ಸಖಾಫಿ ಕಿನ್ಯ, ಹಾಮೀದ್ ಸಅದಿ ದೇರಿಕಟ್ಟೆ ಆಯ್ಕೆಯಾದರು.
ಸಭೆಯಲ್ಲಿ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿನ್ಯ, ಎಸ್.ಜೆ.ಎಂ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ನಈಮಿ ಉರುಮಣೆ, ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಇಸ್ಹಾಕ್ ಝುಹ್ರಿ ಕಾನೆಕೆರೆ, ಜಿಲ್ಲಾ ಕಾರ್ಯದರ್ಶಿ ಮೆಹಬೂಬ್ ಸಖಾಫಿ ಕಿನ್ಯ ಸಹಿತವಿರುವ ನಾಯಕರು, ಕೌನ್ಸಿಲರ್‌ಗಳು ಉಪಸ್ಥಿತರಿದ್ದರು.
ಝೋನ್ ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ ಬದ್ಯಾರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ರಾಝಿಕ್ ಸಅದಿ ಧನ್ಯವಾದವಿತ್ತರು.