ಮಂಗಳೂರು: ಜನವರಿ 1 ರಿಂದ ಜನವರಿ 20 ರ ತನಕ “ಸತ್ಪಥದ ಸಂಕಲ್ಪ” ಎಂಬ ಘೋಷಣೆಯಲ್ಲಿ ರಾಜ್ಯಾದ್ಯಂತ ಎಸ್‌ವೈಎಸ್ ನ ಸದಸ್ಯತ್ವ ಸಡಗರ ಅಭಿಯಾನ ನಡೆಯಲಿದ್ದು, ಇದರ ಜಿಲ್ಲಾ ಮಟ್ಟದ ಸದಸ್ಯತನ ಮಾಹಿತಿ ಕಾರ್ಯಾಗಾರ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ವಿ.ಯು.ಇಸ್ಹಾಖ್ ಝುಹ್ರಿ ಕಾನೆಕರೆ ರವರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ತಿಬ್ಲೆಪದವು ವಿನಲ್ಲಿ ನಡೆಯಿತು.
ಎಸ್‌ವೈಎಸ್ ರಾಜ್ಯ ನಾಯಕ ಮಹಮ್ಮದಲಿ ಸಖಾಫಿ ಸುರಿಬೈಲ್ ಸಭೆಯನ್ನು ಉದ್ಘಾಟಿಸಿದರು.
ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿಗಳಾದ ಮನ್ಸೂರ್ ಅಲಿ ಕೋಟಗದ್ದೆ ಹಾಗೂ ಇಬ್ರಾಹಿಂ ಖಲೀಲ್ ಮಾಲಿಕಿ ರವರು ಸದಸ್ಯತನ ಮಾಹಿತಿ ಕಾರ್ಯಾಗಾರದಲ್ಲಿ ಸದಸ್ಯತ್ವ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಎಸ್.ವೈ.ಎಸ್ ದ.ಕ ವೆಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಸಂಘಟನಾ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯ, ಉಪಾಧ್ಯಕ್ಷ ಬಶೀರ್ ಮದನಿ ಕೂಳೂರು, ಜಿಲ್ಲಾ ಕಾರ್ಯದರ್ಶಿಗಳಾದ ಬದ್ರುದ್ದೀನ್ ಅಝ್ಹರಿ, ರಝಾಕ್ ಭಾರತ್ ಮಂಚಿ, ಬಶೀರ್ ಸಖಾಫಿ ಉಳ್ಳಾಲ, ತೌಸೀಫ್ ಸಅದಿ ಹರೇಕಳ, ಫಾರೂಕ್ ಶೇಡಿಗುರಿ, ಜಿಲ್ಲಾ ನಾಯಕರಾದ ಯಾಕೂಬ್ ಸಅದಿ ನಾವೂರು, ಮುತ್ತಲಿಬ್ ವೇಣೂರು, ಅಬ್ದುಲ್ಲ ಕೊಳಕೆ, ಇಸ್ಹಾಕ್ ಉಳ್ಳಾಲ, ಹಸನ್ ಪಾಂಡೇಶ್ವರ, ಕಾಸಿಂ ಲತೀಫ್ ಮಂಜನಾಡಿ ,ನಾಯಕ ಇಸ್ಹಾಖ್ ತಂಙಳ್ ಅಡ್ಯಾರ್ ಕಣ್ಣೂರು ಹಾಗೂ ಜಿಲ್ಲಾ ವ್ಯಾಪ್ತಿಯ ಏಳು ಝೋನ್‌ಗಳ ಕ್ಯಾಬಿನೆಟ್ ನಾಯಕರು ಉಪಸ್ಥಿತರಿದ್ದರು.
ಎಸ್.ವೈ.ಎಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.