ಬೆಂಗಳೂರು: ಸಅದಿಯಾ ಎಜ್ಯುಏಶನಲ್ ಫೌಂಡೇಶನ್ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಸಭೆಯನ್ನು ಮಂಗಳವಾರ ಯಾರಬ್‌ನಗರ ಸಅದಿಯಾ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿತ್ತು. ಮೌಲಾನ ಎನ್ ಕೆ ಎಂ ಶಾಫಿ ಸಅದಿ ಉಸ್ತಾದರು ಅಧ್ಯಕ್ಷತೆ ವಹಿಸಿದ್ದರು.
ಲತೀಫ್ ಅಸ್‌ಅದಿಯವರು ಸ್ವಾಗತಿಸಿದ ಸಭೆಯನ್ನು ಪ್ರೊಫೆಸರ್ ಲತೀಫ್ ಸಅದಿ ಉಸ್ತಾದ್ ಕೊಟ್ಟಿಲ ಉದ್ಘಾಟನೆ ನೆರವೇರಿಸಿದರು. ನಂತರ ಸಅದಿಯಾ ಮುದರ್ರಿಸ್ ಅಬ್ದುಸ್ಸಮದ್ ಅಹ್ಸನಿ ಉಸ್ತಾದ್ ಮತ್ತು ಅಬ್ದುರ್ರಝ್ಝಾಖ್ ಸಅದಿ ಉಸ್ತಾದ್ ಹಿತವಚನಗಳನ್ನು ನೀಡಿದರು.
ಮೌಲಾನ ಶಾಫಿ ಸಅದಿ ಉಸ್ತಾದರು ಫೆಬ್ರವರಿ ತಿಂಗಳಲ್ಲಿ ನಡೆಯುವ ದಸ್ತರ್ ಬಂದ್ ಕಾರ್ಯಕ್ರಮದ ಬಗ್ಗೆ ವಿಷಯ ಮಂಡಿಸಿದರು. ಮೆನೇಜರ್ ಇಸ್ಮಾಯಿಲ್ ಸಅದಿ ಬೆಂಗಳೂರು ರವರು ಸಅದಿಯಾ ಮುಂದಿನ ಯೋಜನೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ಈ ಸಭೆಯಲ್ಲಿ ಸಅದಿಯಾ ಅಲುಮ್ನಿ ಸಮಿತಿ ರೂಪಿಸಲಾಯಿತು.
ಸಂಸ್ಥೆಯ ಗುರುಗಳೆಲ್ಲರನ್ನು ನಿರ್ದೇಶಕ ರಾಗಿಯೂ ಅಬ್ದುರ್ರಝ್ಝಾಖ್ ಸಅದಿ ಉಸ್ತಾದರನ್ನು ಗೌರವಾಧ್ಯಕ್ಷರಾಗಿಯೂ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಿದ್ದೀಖ್ ಸಖಾಫಿ ಅಲ್‌ಅಸ್ಅದಿ ಹೊಸ್ಪೇಟೆ ಪ್ರ ಕಾರ್ಯದರ್ಶಿ ಅಬ್ದುಲ್ ರಾಶಿದ್ ಸಅದಿ ಅಲ್‌ಅಸ್ಅದಿ ಪದ್ಮುಂಜ ಕೋಶಾಧಿಕಾರಿಯಾಗಿ ಮನ್ಸೂರ್ ಸಅದಿ ಅಲ್‌ಅಸ್ಅದಿ. ಉಪಾಧ್ಯಕ್ಷರಾಗಿ ಅಬ್ದುಲ್ಲತೀಫ್ ಅಸ್ಅದಿ, ರಫೀಕ್ ಅಸ್‌ಅದಿ ದಾವೂದ್ ಅಸ್‌ಅದಿ, ಕಾರ್ಯದರ್ಶಿ ಗಳಾಗಿ ಅನ್ವರ್ ಅಸ್ಅದಿ ಮತ್ತು ಅಬ್ದುರ್ರಹ್ಮಾನ್ ಅಸ್‌ಅದಿಯನ್ನು ನೇಮಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಬಹ್ರುಲ್ ಉಲೂಂ ಒ.ಕೆ ಉಸ್ತಾದ್ ಸಂಸ್ಥೆಯ ನಿಕಟಪೂರ್ವ ಮೆನೇಜರ್ ಮಹ್ಮೂದ್ ಮಖ್ದೂಮಿ, ಕಾರ್ಯದರ್ಶಿ ಶುಕೂರ್ ಹಾಜಿ ಅವರುಗಳನ್ನು ಅನುಸ್ಮರಿಸಿ ದುಆದೊಂದಿಗೆ ಕೊನೆಗೊಳಿಸಲಾಯಿತು.