ಸುಳ್ಯ:ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಶಾಖಾ ವತಿಯಿಂದ ಮರ್ಹೂಂ ಖಲಂದರ್ ಶಾಫಿ ಹಾಗೂ ಸತ್ತಾರ್ ಸಂಗಂ ಸ್ಮರಣಾರ್ಥ ತಹ್ಲೀಲ್, ದುಆ ಮಜ್ಲಿಸ್ ಹಾಗೂ ಇಫ್ತಾರ್ ಸಂಗಮ ಅನ್ಸಾರ್ ಸಭಾ ಭವನದಲ್ಲಿ ನಡೆಯಿತು.
ಖಲಂದರ್ ಶಾಫಿ ಹಾಗೂ ಸತ್ತಾರ್ ಸಂಗಂ ಸುಳ್ಯದ ಯುವ ಜನತೆಗೆ ಮಾದರಿಯಾಗಿದ್ದಾರೆ, ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಮಾಡಿದ ಕಾಕಾರ್ಯಾಚರಣೆಗಳು ಶ್ಲಾಘನೀಯ ಎಂದು ಗಾಂಧಿನಗರ ಕೇಂದ್ರ ಜುಮಾ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ವಯನಾಡ್ ಅನುಸ್ಮರಣೆ ಭಾಷಣ ಮಾಡಿದರು. ಸಯ್ಯದ್ ತ್ವಾಹಿರ್ ಸಅದಿ ತಂಙಳ್ ಅಧ್ಯಕ್ಷತೆ ವಹಿಸಿದರು. ಅಬ್ದುರ್ರಹ್ಮಾನ್ ಸಅದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜುಮಾ ಮಸೀದಿ ಉಪಾಧ್ಯಕ್ಷರಾದ ಅಬ್ಬಾಸ್ ಹಾಜಿ ಕಟ್ಟೆಕಾರ್, ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ, ಕಾರ್ಯದರ್ಶಿ ಐ. ಇಸ್ಮಾಯಿಲ್, ಅನ್ಸಾರ್ ಅಧ್ಯಕ್ಷರಾದ ಹಾಜಿ ಮುಸ್ತಫಾ ಜನತಾ, ಅನ್ಸಾರಿಯಾ ಅಧ್ಯಕ್ಷರಾದ ಮಜೀದ್ ಹಾಜಿ ಜನತಾ, ಅಬ್ದುಲ್ ಕಲಾಂ ಬೀಜಕೊಚ್ಚಿ, SჄS ಪುತ್ತೂರು ಝೋನಲ್ ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ, ನಗರ ಪಂಚಾಯತ್ ಸದಸ್ಯರಾದ ಉಮರ್ ಕೆ.ಎಸ್, ಕೆ.ಸಿ.ಎಫ್ ನಾಯಕರಾದ ಸಿದ್ದೀಕ್ ಮಾಂಬ್ಳಿ, ತಾಜುದ್ದೀನ್ ಟಿಂಬರ್, ಸಿದ್ದೀಕ್ ಕೊಕ್ಕೊ, ರಿಯಾಝ್ ಕಟ್ಟೆಕಾರ್, ಇಬ್ರಾಹೀಂ ಮಾಂಬ್ಳಿ, ರಝಾಕ್ ಸಂಗಂ, ರಫೀಕ್ ಚಾಯ್ಸ್, ಜುನೈದ್ ಎನ್.ಎ, ಸಿದ್ದೀಕ್ ಕಟ್ಟೆಕಾರ್, ನೌಶಾದ್ ಕೆರೆಮೂಲೆ, ಮುನೀರ್ ಗುರುಂಪು, ಎಸ್ಸೆಸ್ಸೆಫ್ ಗಾಂಧಿನಗರ ಶಾಖಾಧ್ಯಕ್ಷರಾದ ಆರಿಫ್ ಬುಶ್ರಾ ಮುಂತಾದವರು ಉಪಸ್ಥಿತರಿದ್ದರು. ಸ್ವಬಾಹ್ ಹಮೀದ್ ಬೀಜಕೊಚ್ಚಿ ಸ್ವಾಗತಿಸಿದರು.