ರಿಯಾದ್: ರಂಝಾನ್ ತನ್ನ ಕೊನೆಯ ಹತ್ತು ದಿನಗಳನ್ನು ಪ್ರವೇಶಿಸುತ್ತಿದ್ದಂತೆ, ಮದೀನಾದಲ್ಲಿ ಶಟಲ್ ಬಸ್ ಸೇವೆಗಳ ಸಮಯವನ್ನು ವಿಸ್ತರಿಸಲಾಗಿದೆ. ಮದೀನಾ ನಗರದ ವಿವಿಧ ಭಾಗಗಳಿಂದ ಜನರನ್ನು ಮಸ್ಜಿದುನ್ನಬವಿ ಮತ್ತು ಖುಬಾ ಮಸೀದಿಗೆ ತ್ವರಿತವಾಗಿ ಕರೆತರಲು ಮದೀನಾ ಅಭಿವೃದ್ಧಿ ಪ್ರಾಧಿಕಾರದಿಂದ ಶಟಲ್ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುವ ಸೇವೆಯನ್ನು ತರಾವೀಹ್ (ಖಿಯಾಮುಲೈಲ್) ನಮಾಝ್ ಮುಗಿದು 1.30 ಗಂಟೆಗಳಕಾಲ ವಿಸ್ತರಿಸಲಾಗಿದೆ. ಮದೀನಾ ನಿವಾಸಿಗಳು ಮತ್ತು ಸಂದರ್ಶಕರನ್ನು ಮಸ್ಜಿದುನ್ನಬವಿ ಮತ್ತು ಕುಬಾ ಮಸೀದಿಗೆ ಮತ್ತು ಅಲ್ಲಿಂದ ಹೊರಡುವ ಸೇವೆಗಾಗಿ ಏಳು ಸ್ಥಳಗಳನ್ನು ಗೊತ್ತುಪಡಿಸಲಾಗಿದೆ. ಅವುಗಳೆಂದರೆ ಸ್ಪೋರ್ಟ್ಸ್ ಸ್ಟೇಡಿಯಂ, ದುರತ್ ಅಲ್ ಮದೀನಾ, ಸೈದ್ ಅಲ್ ಶುಹಾದಾ, ಇಸ್ಲಾಮಿಕ್ ಯೂನಿವರ್ಸಿಟಿ, ಖಾಲಿದಿಯಾ ಜಿಲ್ಲೆ, ಶಾತ್ವಿಯಾ ಜಿಲ್ಲೆ ಮತ್ತು ಬನಿ ಹರಿತಾ. ಪ್ರತಿ ವರ್ಷ ರಂಜಾನ್ ಸಂದರ್ಭದಲ್ಲಿ ಶಟಲ್ ಬಸ್ ಸೇವೆಯನ್ನು ಏರ್ಪಡಿಸಲಾಗುತ್ತದೆ.