ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಗೆ
30 ರ ಹರೆಯ. 1995 ರಲ್ಲಿ ಸ್ಥಾಪನೆಗೊಂಡ ಡಿಕೆಯಸ್ಸಿಯು 30 ನೇ ವರ್ಷಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಗೊಳಿಸುವಲ್ಲಿ ಸಹಕರಿಸಿರಿ ಎಂದು ಡಿಕೆಯಸ್ಸಿ ವಿಷನ್ ಮೂವತ್ತರ ಚೆಯರ್ಮ್ಯಾನ್ ಹಾತಿಂ ಕೂಳೂರು ನುಡಿದರು.ಅವರು ಡಿಕೆಯಸ್ಸಿ ದಮ್ಮಾಂ ಆಯೋಜಿಸಿದ್ದ ಗ್ರ್ಯಾಂಡ್ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮರ್ಹೂಂ ಹಾತಿಂ ಕಂಚಿ ವೇದಿಕೆಯ ಲ್ಲಿ ನಡೆದ ಸಮಾರಂಭದಲ್ಲಿ ದಮ್ಮಾಂ ಅಧ್ಯಕ್ಷ ಸಯ್ಯಿದ್ ಬಾವ ಬಜ್ಪೆ ಅಧ್ಯಕ್ಷತೆ ವಹಿಸಿದ್ದರು.
ಮುಹಮ್ಮದ್ ಸಖಾಫಿ ಸಮಾರಂಭಕ್ಕೆ ಚಾಲನೆ ನೀಡಿದರು.ಎಸ್. ಐ. ಸಿ ದಮ್ಮಾಂ-ಖೋಬರ್ ಕೋ ಆರ್ಡಿನೇಟರ್ ಸಿನಾನ್ ಹುದವಿ ಬದ್ರ್ ಸಂದೇಶ ನೀಡಿದರು.
ಡಿಕೆಯಸ್ಸಿ ದಮ್ಮಾಂ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾಪು, ಮಾಜಿ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ, ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್, ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಗಫೂರ್ ಸಜಿಪ, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಹಸನ್ ಮೂಡುತೋಟ ಮತ್ತು ಸುಲೈಮಾನ್ ಸೂರಿಂಜೆ, ಅಲ್ ಖೋಬರ್ ಅಧ್ಯಕ್ಷ ಅಶ್ರಫ್ ಚಿಕ್ಕಮಗಳೂರು, ಕೆಸಿಎಫ್ ಸೌದಿ ಅಧ್ಯಕ್ಷ ನಝೀರ್ ಕಾಶಿಪಟ್ಣ, ಎಸ್. ಎಚ್. ಅನ್ಸಾರಿ ಸುರತ್ಕಲ್, ಜುಬೈಲ್, ತುಖ್ಬಾ,ಅಲ್ ಖೋಬರ್ ಮತ್ತು ದಮ್ಮಾಂ ಪರಿಸರದ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು.
ಅಬ್ದುಲ್ ಅಝೀಝ್ ಮೂಡುತೋಟ, ಸಿದ್ದೀಖ್ ಕೊಂಚಾರ್, ಅಬೂಬಕ್ಕರ್ ಅಜಿಲಮೊಗರು, ಉಮರ್ ಮರವೂರು, ಇಮ್ತಿಯಾಝ್ ಕೂಳೂರು ,ಅಬ್ದುಲ್ ಹಮೀದ್ ಕೊಲ್ನಾಡ್, ರಶಾದ್ ಮೂಲರಪಟ್ನ ಉಸ್ಮಾನ್ ಕಣ್ಣಂಗಾರ್ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.
ಝಕರಿಯ್ಯಾ ಫೈಝಿ ದುಆ ಗೈದರು.
ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳ ಸ್ವಾಗತ , ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.