ಡಿ.ಕೆ.ಎಸ್.ಸಿ. ಹಾಯಿಲ್ ಘಟಕ ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 29-02-2024ರ ಗುರುವಾರ ಅಸ್ತ ಶುಕ್ರವಾರ ರಾತ್ರಿ ಜಿ.ಕೆ.ಅಂಜದಿ ಉಸ್ತಾದರ ನಿವಾಸ ನುಗ್ರದಲ್ಲಿ ಜರುಗಿತು.
ಖಲೀಲ್ ಝುಹ್‌ರಿ ಉಸ್ತಾದರ ದುಆದ ಮೂಲಕ ಶುಭಾರಂಭಗೊಂಡ ಸಭೆಯಲ್ಲಿ ಮುಖ್ತಾರ್ ಸಖಾಫಿ ಉಸ್ತಾದ್ ಸಭೆಯನ್ನು ಉದ್ಘಾಟಿಸಿದರು. ಜಿ.ಕೆ. ಇಬ್ರಾಹಿಂ ಅಂಜದಿ ಉಸ್ತಾದ್ ಡಿ.ಕೆ.ಎಸ್.ಸಿ. ಸಂಸ್ಥೆಯ ಬಗ್ಗೆ ಚುಟುಕಾಗಿ ವಿವರಿಸಿ ಮಾತನಾಡಿದರು.
ರಿಯಾದ್ ಝೋನ್ ಅಧ್ಯಕ್ಷರಾದ ಜನಾಬ್ ಅಝೀಝ್ ಬಜ್ಪೆ ವರ ನೇತೃತ್ವದಲ್ಲಿ 2024-2025ರ ಸಾಲಿಗೆ ಈ ಕೆಳಗಿ ಸುದೃಢವಾದ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಕಮರುದ್ದೀನ್ ಪಂಜೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಕೆ.ಅಂಜದಿ, ಕೋಶಾಧಿಕಾರಿಯಾಗಿ ಸುಲೈಮಾನ್ ಆತ್ರಾಡಿ, ಉಪಾದ್ಯಕ್ಷರುಗಳಾಗಿ ಮುಖ್ತಾರ್ ಸಖಾಫಿ, ಇಲ್ಯಾಸ್ ಲತೀಫಿ ಜೊತೆ ಕಾರ್ಯದರ್ಶಿಯಾಗಿ ಫಾರೂಖ್ ನಿರ್ದೇಶಕರಾಗಿ ಮುಹ್ಯದ್ದೀನ್ ಸಅದಿ ಸಂಚಾಲಕರಾಗಿ ಹಾರಿಸ್ ಮಂಡೆಕೋಲು, ಅನ್ಸಾರ್ ನೆಕ್ಕಿಲ ಪಂಜ ಎಕ್ಸಿಕ್ಯೂಟಿವಾಗಿ ಕರೀಂ ಕಾಪು, ಸುಹೈಲ್ ದೇಲಂಪಾಡಿ, ಶಾಹಿದ್ ಸುಳ್ಯ ಆಯ್ಕೆಗೊಂಡರು.
ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಹಾಜರಿದ್ದ ಅಬ್ದುಲ್ ಖಾದರ್ ಕನ್ನಂಗಾರ್, ಅಬ್ದುರ್ರಹ್ಮಾನ್ ಸುಲೈಮಾನ್ ಮಾತನಾಡಿ ನೂತನ ಸಭೆಗೆ ಶುಭಹಾರೈಸಿದರು.
ನೂತನ ಸಮಿತಿಗೆ ಆಯ್ಕೆಗೊಂಡ ಅಧ್ಯಕ್ಪ, ಕೋಶಾಧಿಕಾರಿಗಳಾದ ಕಮರುದ್ದೀನ್ ಪಂಜೋಡಿ, ಸುಲೈಮಾನ್ ಆತ್ರಾಡಿ ಸಭಿಕರನ್ನುದ್ದೇಶಿಸಿ ಮಾತನಾಡಿ ಮುಂದಿನ ವರ್ಷದಲ್ಲಿ ಎಲ್ಲರ ಸಹಕಾರದೊಂದಿಗೆ ಅತ್ಯುತ್ತಮ ನಿರ್ವಹಣೆಯ ಭರವಸೆಯನಿತ್ತರು.
ಅನ್ಸಾರ್ ನೆಕ್ಕಿಲ ಧನ್ಯವಾದಗೈದರು.
ಮೂರು ಸ್ವಲಾತಿನೊಂದಿಗೆ ಸಭೆಯು ಮುಕ್ತಾಯಗೊಂಡಿತು.