ಕುವೈತ್ ಸಿಟಿ : ಕರ್ನಾಟಕ ಕಲ್ಚರಲ್ ಫೌಂಡೇಶನ್
KCF ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕೆಸಿಎಫ್ ಡೇ ದಶವಾರ್ಷಿಕ ಕಾರ್ಯಕ್ರಮ 22/23/2024 ರ ಗುರುವಾರ ಮತ್ತು ಶುಕ್ರವಾರದಂದು ಕಬ್ದ್ ನ ಇಜಿಲ್ ನಲ್ಲಿ ಸಂಭ್ರಮದಿಂದ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹು ಹುಸೈನ್ ಮುಸ್ಲಿಯಾರ್ ಏರುಮಾಡ್ ವಹಿಸಿ ಸಂಘಟನೆಯಿಂದ ಏಕಾಗ್ರತೆ ಹಾಗೂ ಬಾಂಧವ್ಯ ಮತ್ತು ಸಮಗ್ರತೆ ಮನುಷ್ಯರಲ್ಲಿ ಇರುವುದು ಎಂದು ಕಾರ್ಯಕರ್ತರಿಗೆ ವಿವರಿಸಿದರು, ಅತಿಥಿಗಳನ್ನು ಜನಾಬ್ ಇಬ್ರಾಹಿಂ ವೇಣೂರ್ ಸ್ವಾಗತಿಸಿದರು, KCF ವಾರ್ಷಿಕ ಸ್ವಲಾತ್ ಮಜ್ಲಿಸ್ ಬಹುಮಾನ್ಯ ಅಲ್ ಖಾದಿಸ ಶಿಲ್ಪಿ ಡಾ:ಮುಹಮ್ಮದ್ ಫಾಝಿಲ್ ರಿಝ್ವಿ ಕಾವಲ್ ಕಟ್ಟೆ ಹಝ್ರತ್ ರವರು ದುಆ ನೆರವೇರಿಸಿದರು.
ಸಂಘಟನೆ ತರಗತಿ ಬಹು:- ಕಲಂದರ್ ರಿಝ್ವಿ ಬೆಜ್ಜಹಳ್ಳಿ ಅಲ್ ಖಾದಿಸ GCC ಕೋ ರ್ಡಿನೇಟರ್ ನಡೆಸಿಕೊಟ್ಟರು,ಸಂಘಟನೆ ಅಧ್ಯಕ್ಷರು ಬಹು ಉಮರ್ ಝುಹ್ರಿ ಹಾಗೂ ಸಮೀರ್ KC ರೋಡ್ ಉಪಸ್ಥಿತರಿದ್ದರು, ಕ್ರೀಡಾಕೂಟವನ್ನು ಜನಾಬ್ ಇಸ್ಮಾಯಿಲ್ ಐಯಂಗೇರಿ ನಡೆಸಿ ಕೊಟ್ಟರು ಕಬಡ್ಡಿ , ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟ ಜಯಗಳಿಸಿ ಚಾಂಪಿಯನ್ ಎಣಿಸಿಕೊಂಡಿತು, ಮದ್ಯಾಹ್ನ ಜಲಾಲಿಯಾ ಮಜ್ಲಿಸ್ ನಡೆಯಿತು KCF ಸರ್ವ ಉಲಮಾ ಉಮರಾ ನಾಯಕರು ಹಾಜರಿದ್ದರು, 3 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ಬಹು ಹುಸೈನ್ ಮುಸ್ಲಿಯಾರ್ ಎರ್ಮಡ್ ವಹಿಸಿದ್ದರು.
KCF ಡೇ ಕಾರ್ಯಕ್ರಮದ ಪ್ರೋಗ್ರಾಮ್ ಕನ್ವಿನರ್ ಜನಾಬ್ ಯಾಕೂಬ್ ಕಾರ್ಕಳ ಮಾತನಾಡಿ KCF ಸದಸ್ಯರ ಕಾರ್ಯವೈಕರಿಯನ್ನು ಶ್ಲಾಘೀಸಿದರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು, IC ಆಡಳಿತ ವಿಭಾಗ ಕಾರ್ಯದರ್ಶಿ ಬಹು ಅಬ್ದುಲ್ ರಹ್ಮಾನ್ ಸಖಾಫಿಕುವೈಟ್, ಸಾಹುಲ್ ಹಮೀದ್ ಸಅದಿ ಝುಹುರಿ ಫಾರೂಕ್ ಸಖಾಫಿ, ಅಬ್ಬಾಸ್ ಬಳಂಜ,ಶೌಕತ್ ಶಿರ್ವ,ಇಬ್ರಾಹಿಂ ವೇಣೂರು ,ಮೂಸಾ ಇಬ್ರಾಹಿಂ,ಇಕ್ಬಾಲ್ ಕಂದಾವರ, ಅಬ್ದುಲ್ ಮಲಿಕ್,ಉಪಸ್ಥಿತರಿದ್ದರು,
ಬಹುಮಾನ್ಯ ಡಾ ಕಾವಲ್ ಕಟ್ಟೆ ಹಝ್ರತ್ ಮಾತನಾಡಿ ವಿದ್ಯಾರ್ಥಿಗಳು ಮುಂದಿನ ಭವಿಷ್ಯ, ಸಮಾಜದ ಮಕ್ಕಳು ದಾರಿ ಅಮಲು ಪದಾರ್ಥ ಗಳಿಗೆ ಬಲಿ ಆಗುವುದನ್ನು ನಾವು ನೋಡುತ್ತಿದ್ದೇವೆ ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಎಚ್ಚೆತ್ತು ಕೊಳ್ಳಬೇಕು ಎಂದು ವಿನಂತಿಸಿದರು.
KCF ಉಲಮಾ ನೇತಾರರು ಅಶಂಶ ಗೈದರು, ವಿಶೇಷವಾಗಿ ಮಹಿಳೆಯಾರಿಗೆ ಪ್ರತ್ಯೇಕ ಸ್ಥಳವಕಾಶ ದ ವ್ಯವಸ್ಥೆ ಮಾಡಲಾಗಿತ್ತು, ಕ್ರೀಡಾಪಟುಗಳಿಗೆ ಬಹುಮಾನ ಮತ್ತು ಪ್ರಮಾಣ ನೀಡಲಾಯಿತು, ನಾಆತೆ ಷರೀಫ್ ಮತ್ತು ನೆಬಿಗಾನ, ಮತ್ತು ಐ ಟೀಮ್ ಎಲ್ಲಾರ ಗಮನ ಸೆಳೆಯಿತು ಕೊನೆಯಲ್ಲಿ, ಮುಸ್ತಫಾ ಉಳ್ಳಾಲ ಮತ್ತು ಸಮೀರ್ ಕೆಸಿರೋಡ್ ಧನ್ಯವಾದ ಗೈದು ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮವು ಮುಕ್ತಾಯ ಗೊಳಿಸಲಾಯಿತು
ವರದಿ ಇಬ್ರಾಹಿಂ ವೇಣೂರು (ಕುವೈಟ್ ಕೆಸಿಎಫ್ ಪಬ್ಲಿಕೇಶನ್ ವಿಭಾಗ)