ದಮ್ಮಾಮ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನಕ್ಕೊಳಪಟ್ಟ ತುಖ್ಬಾ ಘಟಕದ 29 ನೇ ವಾರ್ಷಿಕ ಮಹಾಸಭೆ ದಿನಾಂಕ 15, ಫೆಬ್ರವರಿ 2024 ಗುರುವಾರ ಅಸ್ತ ಶುಕ್ರವಾರ ರಾತ್ರಿ 10.30 ಕ್ಕೆ ಸರಿಯಾಗಿ ತುಖ್ಬಾ ದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ತುಖ್ಬಾ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಇಸ್ಮಾಯೀಲ್ ಕಾಟಿಪಳ್ಳ ದುಆ ಗೈದರು.
ಮರ್ಕಝ್ ತಅಲೀಮಿಲ್ ಇಹ್ಸಾನ್ ಇದರ ಹಳೆ ವಿದ್ಯಾರ್ಥಿ ಮುರ್ಶಿದ್ ಅಹ್ಮದ್ ಉಚ್ಚಿಲ ಪವಿತ್ರ ಖುರ್ಆನ್ ಪಠಿಸಿದರು.
1995 ರಿಂದ ಪ್ರಾರಂಭಗೊಂಡು 2024 ರ ತನಕದ 29 ವರ್ಷಗಳಿಂದ ಡಿಕೆಯಸ್ಸಿ ನಡೆದುಕೊಂಡು ಬಂದ ಹಾದಿಯನ್ನು ವಿವರಿಸುತ್ತಾ ಅಲ್ಲಾಹನ ಪವಿತ್ರ ನಾಮದಿಂದ ಸಮಾರಂಭವನ್ನು ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳ ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಮುರ್ಶಿದ್ ಅಹ್ಮದ್ ಉಚ್ಚಿಲ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಅಸ್ಲಂ ಶಿರ್ವ ಪ್ರವರ್ತನಾ ವರದಿ ಮಂಡಿಸಿ ಸಭೆಯ ಅಂಗೀಕಾರ ಪಡೆದರು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ತುಖ್ಬಾ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು ಮಾತನಾಡುತ್ತಾ ಡಿಕೆಯಸ್ಸಿಗಾಗಿ ತಾವುಗಳು ನೀಡಿದ ಸತ್ಕರ್ಮಗಳನ್ನು ಅಲ್ಲಾಹು ಸ್ವೀಕರಿಸಲಿ. ಆಮೀನ್ ಎಂದು ಪ್ರಾರ್ಥಿಸಿದರು.
ಡಿಕೆಯಸ್ಸಿ ತುಖ್ಬಾ ಘಟಕ 30 ನೇ ವರ್ಷಕ್ಕೆ ಪಾದಾರ್ಪಣೆ ಗೈಯ್ಯುತ್ತಿರುವ ಈ ಶುಭ ಸಂದರ್ಭ ತಕ್ಬೀರ್ ಮೂಲಕ ನೆರವೇರಿಸಲಾಯಿತು.
2024-25 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ಡಿಕೆಯಸ್ಸಿ ದಮ್ಮಾಂ ಝೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನಿರ್ವಹಿಸಿದರು.
ಅಧ್ಯಕ್ಷರಾಗಿ ಅಸೀಬ್ ರಹ್ಮಾನ್ ಮೂಳೂರು, ಪ್ರಧಾನ ಕಾರ್ಯದರ್ಶಿಯಾಗಿ ಸಮ್ ಶೀರ್ ಗುಲಾಂ ಉಚ್ಚಿಲ, ಕೋಶಾಧಿಕಾರಿಯಾಗಿ ಮುಹಮ್ಮದ್ ಶರೀಫ್ ಉಚ್ಚಿಲ ಆಯ್ಕೆಗೊಂಡರು.
ಗೌರವಾಧ್ಯಕ್ಷರಾಗಿ ಡಾ! ಮುಹಮ್ಮದ್ ಶರೀಫ್ ಮೂಳೂರು, ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮೂಳೂರು ಮತ್ತು ಅಬ್ದುಲ್ ಹಮೀದ್ ಉಚ್ಚಿಲ ನೇಮಕಗೊಂಡರು.
ಸಂಘಟನಾ ಕಾರ್ಯದರ್ಶಿಯಾಗಿ ಮುರ್ಶಿದ್ ಅಹ್ಮದ್ ಉಚ್ಚಿಲ, ಸಲಹೆಗಾರರಾಗಿ ಅಬ್ದುರ್ರಹ್ಮಾನ್ ಮೂಳೂರು, ಮಯ್ಯದ್ದಿ ಮಾಮು, ರಿಯಾಝ್ ಮಣಿಪುರ ಹಾಗೂ ಓರ್ಗನೈಝರ್ ಗಳಾಗಿ ಅಸ್ಲಂ ಶಿರ್ವ ಮತ್ತು ಸರ್ಫರಾಝ್ ಉಡುಪಿ ರವರನ್ನು ಆರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಕೆಯಸ್ಸಿ ದಮ್ಮಾಂ ಝೋನ್ ಅಧ್ಯಕ್ಷರಾದ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ರವರು ನೂತನ ಸಮಿತಿಗೆ ಶುಭಾಷಂಸೆಗೈದರು.
ಸಭೆಯ ಕೊನೆಯಲ್ಲಿ ಡಿಕೆಯಸ್ಸಿ ತುಖ್ಬಾ ಘಟಕದ ನೂತನ ಪ್ರಧಾನ ಕಾರ್ಯದರ್ಶಿ ಸಂಶೀರ್ ಗುಲಾಂ ಉಚ್ಚಿಲ ಧನ್ಯವಾದಗೈದರು.
ವರದಿ: ಇಸ್ಮಾಯೀಲ್ ಕಾಟಿಪಳ್ಳ, ದಮ್ಮಾಂ.