janadhvani

Kannada Online News Paper

ಗಲ್ಫ್ ಕಮಿಟಿ ಮೂರುಗೋಳಿ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, HBJM ಮಸೀದಿಯ ಎಲ್ಲಾ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ಜಮಾಅತಿನ ಬಡ ನಿರ್ಗತಿಕರ ಆಶಾಕಿರಣವಾಗಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಾ, ಹತ್ತಲವಾರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕಳೆದ ಎಂಟು ವರ್ಷಗಳಿಂದ ಮುಂದೆ ಸಾಗುತ್ತಿರುವ ಹಝ್ರತ್ ಬಿಲಾಲ್ ಜುಮ್ಮ ಮಸ್ಜಿದ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ HBJM ಗಲ್ಫ್ ಸಮಿತಿ ಮೂರುಗೋಳಿ ಇದರ ವಾರ್ಷಿಕ ಮಹಾಸಭೆಯ ದಿನಾಂಕ 04/02/2024 ಆದಿತ್ಯವಾರ ಗಲ್ಫ್ ಸಮಿತಿಯ ಗೌರವಾಧ್ಯಕ್ಷ ಅತಾವುಲ್ಲಾ ಹಿಮಮಿ ಸಖಾಫಿ ಉಸ್ತಾದರ ಹಾಗೂ ಜಮಾತ್ ಅಧ್ಯಕ್ಷ M A ಖಾದರ್ ಹಾಜಿ ಪ್ರಧಾನಕಾರ್ಯದರ್ಶಿ ಬಶೀರ್ ಮಾಸ್ಟರ್ ಇವರ ನೇತೃತ್ವದಲ್ಲಿ ನಡೆಯಿತು.

ಗೌರವಾಧ್ಯಕ್ಷರಾಗಿ ಅತಾವುಲ್ಲಾ ಹಿಮಮಿ ಸಖಾಫಿ, ಗೌರವ ಸಲಹೆಗಾರರಾಗಿ ಅಬ್ದುರಹ್ಮಾನ್ ಮನಿಲ M‌, ಯೂಸುಫ್ EM, ಹಂಝ ಲತೀಫ್ ಬಾರ್ಯ, MA ದಾವೂದ್ ರಫೀಕ್ ಸಅದಿ ಯವರನ್ನು ನೇಮಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ EM ಸಿರಾಜುದ್ದೀನ್ ಮಡಂತಿಲ, ಉಪಾಧ್ಯಕ್ಷರಾಗಿ BMಅಮೀರ್ ಮತ್ತು ಕರೀಂ ಖಂಡಿಗ, ಕೋಶಾಧಿಕಾರಿ BM ಹಮೀದ್ ಮಡಂತಿಲ, ಪ್ರದಾನ ಕಾರ್ಯದರ್ಶಿ MA ಬಶೀರ್, ಜೊತೆ ಕಾರ್ಯದರ್ಶಿ ಸಂಶುದ್ದೀನ್ ಮನಿಲ, EM ಮುಸ್ತಫ KA ರಿಲ್ವಾನ್, ಸಂಘಟನಾ ಕಾರ್ಯದರ್ಶಿ KA ಮಂಝಿರ್, ಸಲಹಾ ಕಾರ್ಯದರ್ಶಿ BPನಿಸಾರ್ (ನಿಚ್ಚು) ಸೇರಿದಂತೆ ಒಟ್ಟು 34 ಸದ್ಯರೊಳಗೊಂಡ ಸಮಿತಿಯನ್ನು ಆರಿಸಲಾಯಿತು.

error: Content is protected !! Not allowed copy content from janadhvani.com