janadhvani

Kannada Online News Paper

ಕಾಜೂರ್ ಮಖಾಂ ಉರೂಸ್, 2024 ಎಪ್ರಿಲ್ 19 ರಿಂದ 28 ರ ತನಕ ; ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ರಿಂದ ಪೋಸ್ಟರ್ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾದ, ಇತಿಹಾಸ ಪ್ರಸಿದ್ಧ ಕಾಜೂರ್ ಮಖಾಂ ಶರೀಫ್ ಉರೂಸ್ ಕಾರ್ಯಕ್ರಮವು 2024 ಎಪ್ರಿಲ್ 19 ರಿಂದ 28 ರ ತನಕ ನಡೆಯಲಿದ್ದು, ಅದರ ಪೋಸ್ಟರ್ ಅನ್ನು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರ್ ಗೌರವಾಧ್ಯಕ್ಷರೂ, ಸಮಸ್ತ ಕೇರಳ ಕೇಂದ್ರ ಮುಶಾವರಾ ಉಪಾಧ್ಯಕ್ಷರೂ ಆದ ಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ರವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಉರೂಸ್ ಸಮಿತಿ ಅಧ್ಯಕ್ಷರಾದ ಜನಾಬ್ ಕೆ.ಯು ಇಬ್ರಾಹಿಂ.ಪ್ರಧಾನ ಕಾರ್ಯದರ್ಶಿ ಜೆ‌ಎಚ್ ಅಬೂಬಕ್ಕರ್ ಸಿದ್ದೀಕ್, ಪ್ರಮುಖರಾದ M‌.A ಕಾಸಿಂ ಮಲ್ಲಿಗೆ ಮನೆ, ಬದ್ರುದ್ದೀನ್ ಕಾಜೂರ್, ಎ.ಯು ಮುಹಮ್ಮದ್ ಅಲಿ ಉಪಸ್ಥಿತರಿದ್ದರು.

ಶಿಕ್ಷಣ ಸಂಸ್ಥೆಗಳ ಯಶಸ್ವೀ ನಿರ್ವಹಣೆ, ಆಡಳಿತ ವ್ಯವಸ್ಥೆ, ಗುಣಮಟ್ಟದ ಕಲಿಕಾ ವಿಧಾನ,
ಇಂಗ್ಲಿಷ್ ಮೀಡಿಯಂ , ಪ್ರೌಢ ಶಾಲೆ ,ಮಹಿಳಾ ಪದವಿ ಪೂರ್ವ ಕಾಲೇಜ್ ,ದಅವಾ ದರ್ಸ್ ಇನ್ನಿತರ ಎಲ್ಲಾ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುವಂತೆ ಮಾರ್ಗದರ್ಶನ ನೀಡಿದರು.

error: Content is protected !! Not allowed copy content from janadhvani.com