ಜಿದ್ದಾ: ವಿಮಾನ ಯಾತ್ರಿಕರು ಸಾಮಾನು ಸರಂಜಾಮುಗಳನ್ನು ಸಾಗಿಸುವಾಗ ತಿಳಿದಿರಬೇಕಾದ ವಿಷಯಗಳ ಬಗ್ಗೆ ಜಿದ್ದಾ ವಿಮಾನ ನಿಲ್ದಾಣವು ಮಾಹಿತಿ ನೀಡಿದೆ. ಅನುಮತಿಯಿಲ್ಲದ ರೀತಿಯ ಲಗೇಜ್ ಅನ್ನು ಕೊಂಡೊಯ್ಯುವುದನ್ನು ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣದ ಅಧಿಕಾರಿಗಳು ನಿಷೇಧಿಸಿದ್ದಾರೆ. ಪ್ರಯಾಣಿಕರು ನಿಗದಿತ ಮಾದರಿಯನ್ನು ಮಾತ್ರ ತರಲು ತಿಳಿಸಲಾಗಿದೆ.
ಹಗ್ಗಗಳಿಂದ ಕಟ್ಟಿದ ಬ್ಯಾಗೇಜ್, ಬಟ್ಟೆಯಿಂದ ಕಟ್ಟಿದ ಬ್ಯಾಗೇಜ್, ಸರಿಯಾಗಿ ಪ್ಯಾಕ್ ಮಾಡದ ಮತ್ತು ದುಂಡಗಿನ ಬ್ಯಾಗ್, ಟಿಕೆಟ್‌ನಲ್ಲಿ ಅನುಮತಿಸಲಾದ ತೂಕಕ್ಕಿಂತ ಹೆಚ್ಚಿನ ತೂಕದ ಲಗೇಜು, ಬಟ್ಟೆಯ ಬ್ಯಾಗ್‌ಗಳ ಬ್ಯಾಗೇಜ್ ಮತ್ತು ಉದ್ದನೆಯ ದಾರವಿರುವ ಬ್ಯಾಗ್‌ಗಳೊಂದಿಗೆ ಪ್ರಯಾಣಿಸಬಾರದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.