ಬಾರೆಬೆಟ್ಟು; ಕಬಕ ಉಸ್ತಾದ್ ರವರ ನೇತೃತ್ವದಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುತಿರುವ 33 ನೇ ವರ್ಷದ ಜಲಾಲಿಯತ್ ರಾತೀಬ್ 2023 ನವೆಂಬರ್ 5 ,ಅದಿತ್ಯವಾರ ಅಸ್ತಮಿಸುವ ಸೋಮವಾರ ಮಗ್ರಿಬ್ ನಮಾಝ್ ನ ನಂತರ ಉಸ್ತಾದರ ನಿವಾಸ ಬಂಟ್ವಾಳ ತಾಲೂಕಿನ ಕೊಳ್ನಾಡು ಬಾರೆಬೆಟ್ಟು ನೀರಪಳಿಕೆಯಲ್ಲಿ ಜರಗಲಿದೆ. ಇದರ ಅಂಗವಾಗಿ ಅಂದು ಅಸರ್ ನಮಾಝ್ ಬಳಿಕ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ ಎಂದು ಕಬಕ ಉಸ್ತಾದ್ ರವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.