ಪುತ್ತೂರು: ಎಸ್ ವೈ ಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಸಪ್ಟೆಂಬರ್ 02 ಶನಿವಾರ ಪುತ್ತೂರು ಟೌನ್ ಹಾಲ್‌ನಲ್ಲಿ ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ನಾಲ್ಕು ಗಂಟೆ ತನಕ ಕೇರಳ ಕರ್ನಾಟಕದ ಪ್ರಗಲ್ಭ ವಿದ್ವಾಂಸರು, ದಾರ್ಶನಿಕರು, ಸಾಹಿತಿಗಳು ಹಾಗೂ ಚಿಂತಕರಿಂದ ಆಧ್ಯಾತ್ಮಿಕತೆ, ಆದರ್ಶ, ಆರೋಗ್ಯ, ಸಂಘಟನೆ, ಸಾಹಿತ್ಯ ಮುಂತಾದ ವಿವಿಧ ವಿಷಯಗಳಲ್ಲಿ ತರಗತಿಗಳು ನಡೆಯಲಿದೆ.
ಕರ್ನಾಟಕ ಎಸ್ ವೈ ಎಸ್ ತನ್ನ ಮೂವತ್ತನೇ ವಾರ್ಷಿಕ ಆಚರಿಸುವ ಅಂಗವಾಗಿ ಬೆಳಗ್ಗೆ ಎಂಟು ಗಂಟೆಗೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಮೂವತ್ತು ಧ್ವಜಸ್ಥಂಭಗಳಲ್ಲಿ ಧ್ವಜಾರೋಹಣ ನಡೆಯಲಿದೆ. ಒಂಬತ್ತು ಗಂಟೆಗೆ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್,ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ರವರ ನೇತೃತ್ವದಲ್ಲಿ ಜಿಲ್ಲಾ ಪ್ರತಿನಿಧಿ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದೆ.ನಂತರ ವಿವಿಧ ವಿಷಯಗಳಲ್ಲಿ ತರಗತಿ ನಡೆಯಲಿದೆ.
ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ತ್ವಾಹಿರ್ ಸಖಾಫಿ ಮಂಜೇರಿ, ಡಾ.ಸಯ್ಯಿದ್ ಸೈಫುಲ್ಲಾ ಮರ್ಕಝ್ ನಾಲೆಡ್ಜ್ ಸಿಟಿ, ಮರ್ಝೂಕ್ ಸಅದಿ ಕಾರಂದೂರು ಮರ್ಕಝ್, ರಾಶಿದ್ ಬುಖಾರಿ ಕುಟ್ಯಾಡಿ, ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಹಾಫಿಲ್ ಸುಫ್ಯಾನ್ ಸಖಾಫಿ, ಎಕೆ ಸರ್ ನಂದಾವರ ವಿವಿಧ ವಿಷಯಗಳಲ್ಲಿ ತರಗತಿ ನಡೆಸಿಕೊಡಲಿದ್ದಾರೆ.ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಹಫೀಳ್ ಸಅದಿ ಕೊಡಗು,ಕೆ ಎಂ ಅಬೂಬಕರ್ ಸಿದ್ದೀಕ್ ಮೊಂಟುಗೋಳಿ,ಎಂ ಬಿ ಎಂ. ಸಾದಿಕ್ ಮಾಸ್ಟರ್,ಅಡ್ವಕೇಟ್ ಹಂಝತ್,ಎಫ್ ಎಚ್ ಮುಹಮ್ಮದ್ ಮಿಸ್ಬಾಹಿ ಮುಂತಾದ ಉಲಮಾ ಉಮರಾ ನೇತಾರರು,ಮಾನ್ಯ ಪುತ್ತೂರು ಶಾಸಕರಾದ ಶ್ರೀ ಆಶೋಕ್ ರೈ,ಶ್ರೀ ಎಂ ಬಿ ವಿಶ್ವನಾಥ ರೈ,ಶಕೂರ್ ಹಾಜಿ ಪಡೀಲ್, ಮುಂತಾದ ರಾಜಕೀಯ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ.
ಸಂಜೆ ನಾಲ್ಕು ಗಂಟೆ ಸುನ್ನೀ ಸಂಘ ಕುಟುಂಬದ ವತಿಯಿಂದ ಪುತ್ತೂರು ಕಿಲ್ಲೆ ಮೈದಾನದಿಂದ ದರ್ಬೆ ವೃತ್ತದ ತನಕ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ ಬೃಹತ್ ಗೋಲ್ಟನ್ ರ‌್ಯಾಲಿ ನಡೆಯಲಿದೆ.