ಉಡುಪಿ: ಕರ್ನಾಟಕ ಮುಸ್ಲಿಂ ಜಮಾಅತ್ ಬ್ರಹ್ಮಾವರ ಝೋನ್ ಸಮಿತಿಯ ವತಿಯಿಂದ ದ್ವೇಷ ಬಿಟ್ಟು ದೇಶ ಕಟ್ಟು ಎಂಬ ಘೋಷ ವಾಕ್ಯದೂಂದಿಗೆ ಬ್ರಹ್ಮಾವರದ ಆಶ್ರಯ ಸಭಾಂಗಣದಲ್ಲಿ ಪ್ರಜಾಭಾರತ ಕಾರ್ಯಕ್ರಮ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಸೋಮನಾಥ ಹೆಗ್ಡೆಯವರು, ಭಾರತ ಸೌಹಾರ್ದತೆಯ ನೆಲೆಯಾಗಿದೆ.ಇಲ್ಲಿ ವಾಸಿಸುವ ಸರ್ವರೂ ಸಾಮರಸ್ಯ ಹಾಗೂ ಸೌಹಾರ್ದತೆಯಿಂದ ಬದುಕಿ ತಮ್ಮಳೂಗಿನ ದ್ವೇಶವನ್ನು ಬಿಟ್ಟು ಈ ದೇಶವನ್ನು ಕಟ್ಟಬೇಕಂದು ಕರೆನೀಡಿದರು.
ಕಾರ್ಯದರ್ಶಿ ಇಸ್ಮಾಯಿಲ್ ಕೋಡಿ ಸ್ರಷ್ಟೀಕರ್ತನ ನಾಮದಿಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾ ಕಾರ್ಯದರ್ಶಿ ವಕೀಲರಾದ ಇಲ್ಯಾಸ್ ನಾವುಂದ ಮಾತನಾಡಿ, ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸದೆ ವಿವಿಧ ಧರ್ಮಗಳ ಕೆಟ್ಟ ಜನರಿಂದ ನಡೆಯುತ್ತಿರುವ ಕ್ರೌರ್ಯವನ್ನು ಕೊನೆಗೊಳಿಸಲು ಸ್ವಸ್ಥ ಸಮಾಜ ಪ್ರಯತ್ನಿಸಬೇಕೆಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ಸುಭಾನ್ ಅಹ್ಮದ್ ಹೊನ್ನಾಳ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ರಾಮಚಂದ್ರ ಕಾಂಚನ್ ಹೊನ್ನಾಳ ಹಾಗೂ ಅಬ್ದುಲ್ ಸಲೀಮ್ ಮಟಪಾಡಿಯವರನ್ನು ಸನ್ಮಾನಿಸಲಾಯಿತು.
ಝೋನ್ ಅಧ್ಯಕ್ಷರಾದ ಜೆ. ಮುಷ್ತಾಕ್ ಅಹ್ಮದ್ ಹೊನ್ನಾಳ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಜಾರಾಮ್ ಶೆಟ್ಟಿ ಬ್ರಹ್ಮಾವರ. ಕೋಟಿ ಪೂಜಾರಿ ಮದುವನ.ನಾಗರಾಜ್ ಶೆಟ್ಟಿ ಹೊನ್ನಾಳ.ಹಾಜಿ ಸಾಹೇಬ್ ಮದುವನ. ಅಶ್ರಫ್ ಹೂಡೆ. ವಿಶ್ವನಾಥ್ ಶೆಟ್ಟಿ ಮಟಪಾಡಿ.ನಜೀರ್ ಸಾಹೇಬ್ ಬ್ರಹ್ಮಾವರ.ಶೌಕತಲಿ ಬಾರ್ಕೂರ್. ಜಮಾಲ್ ಸಾಹೇಬ್ ಬ್ರಹ್ಮಾವರ. ಗಣೇಶ್ ಶೆಟ್ಟಿ ಹೊನ್ನಾಳ. ಚಂದ್ರಶೇಖರ್ ಶೆಟ್ಟಿ ಹೊನ್ನಾಳ.ಚಂದ್ರ ಶೆಟ್ಟಿ ಮದುವನ.ರಿತೇಶ್ ಹೊನ್ನಾಳ.ದಿನೇಶ್ ಹೊನ್ನಾಳ.ಲಕ್ಷಣ ಶೆಟ್ಟಿ ಮದುವನ.ಅಝ್ಮಲ್ ಅಸ್ಸಾದಿ ಬ್ರಹ್ಮಾವರ. ಬಿ. ಎನ್ ಶಬ್ಬಿರ್ ಉಡುಪಿ . ಮುಷ್ತಾಕ್ ಉಪ್ಪಿನಕೋಟೆ.ಎಂ.ಕೆ ಮುಹಮ್ಮದ್ ಮದುವನ ಮುಹಮ್ಮದ್ ಅಲ್ತಾಫ್ ಮಟಪಾಡಿ ಗುರುಚರಣ್ ಶೆಟ್ಟಿ ಹೊನ್ನಾಳ.ಉಮರುಲ್ ಫಾರೂಕ್ ರಂಗನಕೆರೆ.ಹುಸೈನ್ ಪಡುಕೆರೆ.ಜಮಾಲ್ ಮದುವನ. ಇಮ್ರಾನ್ ಹೊನ್ನಾಳ. ಹಮೀದ್ ಸೈಯದ್. ಹಾಗೂ ಬ್ರಹ್ಮಾವರ ಝೋನ್ ನ ಎಲ್ಲಾ ಪದಾಧಿಕಾರಿಗಳು ವಿವಿಧ ಮೊಹಲ್ಲಾದ ನಾಯಕರು ಸಂಘಟನೆಗಳ ಪ್ರಮುಖರು ಭಾಗವಹಿಸಿ ಶುಭಹಾರೈಸಿದರು. ಕಾರ್ಯದರ್ಶಿ ಇಬ್ರಾಹಿಂ ಆದಂ ಮಟಪಾಡಿ ಸ್ವಾಗತಿಸಿದರು ನಿರೂಪಿಸಿದರು.