janadhvani

Kannada Online News Paper

ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಶನಿ ನಿಲಯ ಕಾಲೇಜು- ಡ್ರಗ್ಸ್ ಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮ

ಬಂಟ್ವಾಳ,ಆ.25: ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಹಾಗೂ ರೋಶನಿ ನಿಲಯ ಕಾಲೇಜು ಮಂಗಳೂರು ಇದರ ಅಶ್ರಯದಲ್ಲಿ ಡ್ರಗ್ಸ್ ಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮವನ್ನು ಮಾರಿಪಳ್ಳ ಜಂಕ್ಷನ್, ತುಂಬೆ ಪದವಿ ಪೂರ್ವ ಕಾಲೇಜು ಮತ್ತು ಫರಂಗಿಪೇಟೆ ಜಂಕ್ಷನ್ ನಲ್ಲಿ ಟ್ರಸ್ಟಿನ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾರಿಪಳ್ಳ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮ ವ್ಯಸನ ಮುಕ್ತವಾದರೆ ಜಿಲ್ಲೆ, ರಾಜ್ಯ ಮತ್ತು ದೇಶ ಸಂಪತ್ಬರಿವಾಗಲಿದೆ.
ನಮ್ಮ ಮನೆಯ ಮಕ್ಕಳು ಸಮಾಜದಲ್ಲಿ ಗುರುತರವಾದ ಸ್ಥಾನವನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಣವನ್ನು ಪಡೆಯಬೇಕು ಎಂದು ಅವರು ತಿಳಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಸಂಸ್ಕಾರಯುತವಾದ ಶಿಕ್ಷಣ ಪಡೆದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.

ಪೋಷಕರ ಕನಸು ನನಸು ಮಾಡಲು ಮಕ್ಕಳು ಗೌರವಯುತ ಜೀವನ ಮಾಡಬೇಕು. ಅದಕ್ಕಾಗಿ ಅಡ್ಯಾರು, ಪುದು, ತುಂಬೆ ಗ್ರಾಮ ವ್ಯಾಪ್ತಿಯಲ್ಲಿ ಅತ್ಯಂತ ಅಪಾಯಕಾರಿ ಹಾಗೂ ಅತೀ ವೇಗವಾಗಿ ಮಾನಸಿಕ ಹಾಗೂ ದೈಹಿಕವಾಗಿ ದುಷ್ಟರಿಣಾಮ ಬೀರಬಲ್ಲ ನಿಷೇಧಿತ ಡ್ರಗ್ಸ್ ವಿರುದ್ಧ ಜಾಗತಿಕ ಅಭಿಯಾನ ಆರಂಭಿಸಿದ್ದೇವೆ ಎಂದು ಅವರು ತಿಳಿಸಿದರು.

ತುಂಬೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎನ್ ಗಂಗಾಧರ ಅಳ್ವ, ರೋಶನಿ ನಿಲಯ ಕಾಲೇಜು ಮಂಗಳೂರು ಉಪನ್ಯಾಸಕಿ ವನೀತಾ.ಕೆ, ಮುಸ್ಲಿಂ ಐಕ್ಯತ್ತ ವೇದಿಕೆ ಅಧ್ಯಕ್ಷರಾದ ಯಾಸೀನ್ ಕುದ್ರೋಳಿ, ಉಪಾಧ್ಯಕ್ಷರಾದ ಅಬೂಬಕ್ಕರ್ ಅಝೀಝ್ ಮಂಗಳೂರು ಮುಂತಾದವರು ಮಾತಾಡಿದರು.

ರೋಶನಿ ನಿಲಯ ಕಾಲೇಜು ಮಂಗಳೂರು ವಿದ್ಯಾರ್ಥಿಗಳು ಡ್ರಗ್ಸ್ ಮುಕ್ತ ಜಾಗೃತಿ ಅಭಿಯಾನದ ಕಿರು ನಾಟಕ ಪ್ರದರ್ಶಿಸಿದರು.

ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸಲಹಾ ಸಮಿತಿಯ ಸದಸ್ಯರಾದ ಹನೀಫ್ ಖಾನ್ ಕೊಡಾಜೆ, ಸಲೀಂ ಅಲ್ತಾಫ್ ಡೈಮಂಡ್, ಶಬೀರ್ ಕೆಂಪಿ ಉಪ್ಪಿನಂಗಡಿ, ಅಬ್ದುಲ್ ರಝಾಕ್ ಕುಂಜತ್ಕಳ, ಇಝ್ಹಾ ಬಜಾಲ್, ಶಾಹುಲ್ ಹಮೀದ್ ಕುಂಪನಮಜಲು, ಮಂಗಳೂರು ಮ.ನ.ಪಾ ಸದಸ್ಯ ಶಂಸುದ್ದೀನ್ HBT ಕುದ್ರೋಳಿ, ಅಬ್ದುಲ್ ಲತೀಫ್, ಇಸ್ಮಾಯಿಲ್ ಮಂಗಳೂರು, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್, ವೈದ್ಯಕೀಯ ಉಸ್ತುವಾರಿ ಸಲೀಂ ಮಲಿಕ್ ಕುಂಪನಮಜಲು, ಜಾಫರ್ ಶರೀಫ್ ಕುಂಜತ್ಕಳ, ಟ್ರಸ್ಟಿನ ಸದಸ್ಯರಾದ ಅಶ್ರಫ್ ಸುಜೀರ್ ಮಲ್ಲಿ, ಇಮ್ರಾನ್ ಮಾರಿಪಳ್ಳ, ಮುಬಾರಕ್ ಕುಂಪನಮಜಲು, ತನ್ಜೀಮ್ ಪೇರಿಮಾರ್, ಸಾಯಿರಾಮ್ ನಾಯಕ್, ತುಂಬೆ ಪದವಿ ಪೂರ್ವ ಕಾಲೇಜು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.

ಟಸ್ಟಿನ ಪ್ರಧಾನ ಕಾರ್ಯದರ್ಶಿ ಸಲಾಂ ಸುಜೀರ್ ರವರು ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com