ಪುತ್ತೂರು : ಕರ್ನಾಟಕ ಸುನ್ನಿ ಯುವಜನ ಸಂಘ ಎಸ್‌ವೈಎಸ್ ದ.ಕ. ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಸಪ್ಟೆಂಬರ್ 02 ಶನಿವಾರದಂದು ಪುತ್ತೂರಿನ ಟೌನ್ ಹಾಲ್‌ನಲ್ಲಿ ‘ಅಲ್ ಅರ್ಖಮಿಯ್ಯ -23’ ಎಂಬ ಹೆಸರಿನಲ್ಲಿ ಬೃಹತ್ ಜಿಲ್ಲಾ ಪ್ರತಿನಿಧಿ ಸಮಾವೇಶ ಹಮ್ಮಿಕೊಂಡಿದೆ. ಆರೋಗ್ಯ, ಆದರ್ಶ, ಆಧ್ಯಾತ್ಮಿಕ, ಸಂಘಟನೆ,
ಸಮಕಾಲೀನ ಸಮಸ್ಯೆ ಹೀಗೆ ವಿವಿಧ ವಿಷಯಗಳಲ್ಲಿ ವಿಚಾರಗೋಷ್ಠಿ ನಡೆಯಲಿದೆ.
ಬೆಳಗ್ಗೆ 09 ಗಂಟೆಗೆ ಆರಂಭವಾಗುವ ಸಮಾವೇಶ ಸಂಜೆ 04 ರ ತನಕ ಮುಂದುವರೆಯಲಿದೆ. ಅದೇ ದಿನ ಸಂಜೆ 04:30 ಗೆ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಪ್ರಚಾರ ಪ್ರಯುಕ್ತ ಗೋಲ್ಡನ್ ರ‌್ಯಾಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಖಾಝಿ ಖುರ್ರತ್ತುಸ್ಸಾದಾತ್ ಅಸ್ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರರವರು ಭಾಗವಹಿಸಲಿದ್ದು ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರಾದ ಖಾಝಿ ಶೈಖುನಾ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿರವರು ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.
ಕಾರ್ಯಕ್ರಮದಲ್ಲಿ ತ್ವಾಹಿರ್ ಸಖಾಫಿ ಮಂಜೇರಿ, ಡಾ. ಸೆಯ್ಯಿದ್ ಸೈಪುದ್ದೀನ್ ನಾಲೇಜ್ ಸಿಟಿ, ಜಿ. ಎಂ. ಎಂ. ಕಾಮಿಲ್ ಸಖಾಫಿ, ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ರಾಶಿದ್ ಬುಖಾರಿ ಕುಟ್ಯಾಡಿ, ಅಬ್ದುಲ್ ಹಫೀಳ್ ಸಅದಿ ಕೊಡಗು, ಸುಫ್ಯಾನ್ ಸಖಾಫಿ ಸಹಿತ ಅನೇಕ ಉಲಮಾಗಳು, ಸಾದಾತುಗಳು, ಸಾಮಾಜಿಕ ಮತ್ತು ರಾಜಕೀಯ ನೇತಾರರು, ಅಂಕಣಗಾರರು, ಚಿಂತಕರು, ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವ್ಯಾಪ್ತಿಯ ಯುನಿಟ್, ಸರ್ಕಲ್, ಸೆಕ್ಟರ್, ಝೋನ್, ಡಿವಿಷನ್ ಗಳಲ್ಲಿ ಬರುವ ಎಲ್ಲಾ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಯೂಸುಫ್ ಸಯೀದ್ ಪುತ್ತೂರು (ಮಾಧ್ಯಮ ಕಾರ್ಯದರ್ಶಿ ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲೆ)