ಎಸ್ಸೆಸ್ಸೆಫ್ ಗೆ ಐವತ್ತು ಸಂವತ್ಸರಗಳು ತುಂಬುತ್ತಿದ್ದು ಇದರ ಕರ್ನಾಟಕ ರಾಜ್ಯದ ಬೃಹತ್ ಸಮ್ಮೇಳನ ಸೆಪ್ಟೆಂಬರ್ 10 ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ.
ಈ ಪ್ರಯುಕ್ತ ರಾಜ್ಯದೆಲ್ಲಡೆ ವಿವಿಧ ಶೈಲಿಯಲ್ಲಿ ಎಸ್ಸೆಸ್ಸೆಫ್ ವಿದ್ಯಾರ್ಥಿ ಸಂಘಟನೆಯು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. SSF ಕರ್ನಾಟಕ ರಾಜ್ಯ ಸಮಿತಿಯ ಆದೇಶದಂತೆ ಗ್ರಾಮ ಸವಾರಿ ಎಂಬ ಹೆಸರಲ್ಲಿ ಡಿವಿಶನ್ ನಾಯಕರು ಯೂನಿಟ್ ಗಳಿಗೆ ಭೇಟಿ ಕೊಡುವ ಕಾರ್ಯಕ್ರಮವು ನಡೆಯಲಿದೆ.
ಮುಡಿಪು ಡಿವಿಶನ್ ವತಿಯಿಂದ ಜುಲೈ 1 ರಂದು ಮೂಳೂರು ದರ್ಗಾ ಝಿಯಾರತ್ ನೊಂದಿಗೆ ಪ್ರಾರಂಭಗೊಂಡು , ಧ್ವಜ ಹಸ್ತಾಂತರಿಸಿ ಪರಪ್ಪು ಯೂನಿಟ್ ನಲ್ಲಿ ಉದ್ಘಾಟಿಸಿ ಜುಲೈ 9 ರಂದು ಮರಿಕ್ಕಳ ಯೂನಿಟ್ ನಲ್ಲಿ ಸಮಾಪ್ತಿಗೊಳ್ಳಲಿದೆ. ಡಿವಿಶನ್ ವ್ಯಾಪ್ತಿಯ ಎಲ್ಲಾ ಮೂಲೆ ಮೂಲೆಗಳಲ್ಲಿಯೂ ಸಂಘಟನೆಯನ್ನು ಬಲಿಷ್ಠಗೊಳಿಸುವ ಸಲುವಾಗಿ ನಾಯಕರು ಹಲವು ಯೋಜನೆಗಳನ್ನು ಕೈಗೊಂಡಿದ್ದಾರೆ.
ಡಿವಿಶನ್ ನಾಯಕರ ಗ್ರಾಮ ಸವಾರಿ ಎರಡು ತಂಡಗಳೊಂದಿಗೆ 6 ಸೆಕ್ಟರ್ ಗಳ 41 ಯೂನಿಟ್ ಗಳ ಮೂಲಕ ಹಾದು ಹೋಗಲಿದೆ, ಇದರ ಮಧ್ಯೆ ಜಾರದಗುಡ್ಡೆ ದರ್ಗಾ ಹಾಗೂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್, ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಮಖ್ಬರ ಝಿಯಾರತ್ ಕೂಡ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ಅಧ್ಯಕ್ಷರಾದ ನೌಷಾದ್ ಮದನಿ ಎಚ್. ಕಲ್, ಪ್ರಧಾನ ಕಾರ್ಯದರ್ಶಿ ಮುನೀರ್ ಕಲ್ಮಿಂಜ ಹಾಗೂ ಫಿನಾನ್ಸ್ ಕಾರ್ಯದರ್ಶಿ ಸಮದ್ ಮೊಂಟೆಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.