ಬೆಂಗಳೂರು ಜೂನ್ 26: ಬೆಂಗಳೂರಿನಲ್ಲಿ ಸೆಪ್ಟೆಂಬರ್ 10 ರಂದು ನಡೆಯಲಿರುವ SSF ಗೋಲ್ಡನ್ ಫಿಫ್ಟಿ ವಿದ್ಯಾರ್ಥಿ ಸಮಾವೇಶದ ಪ್ರಚಾರರ್ಥವಾಗಿ ಗೋಲ್ಡನ್ ಅಸೆಂಬ್ಲಿ ಸಮಾವೇಶವು ಜೂನ್ 25 ರಂದು ಆದಿತ್ಯವಾರ ರಾತ್ರಿ ಹನಫಿ ಮಸ್ಜಿದ್ ಹಲ್ಸೂರು ನಲ್ಲಿ ಜಿ-50 ಸ್ವಾಗತ ಸಮಿತಿ ಅಧ್ಯಕ್ಷರಾದ ಜಾಫರ್ ನಾರಾನಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
.
ಎಸ್ ಎಮ್ ಎ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಹ್ಮಾನ ಹಾಜಿ ಕಾರ್ಯಕ್ರಮವನ್ನು
ಉದ್ಘಾಟಿಸಿದರು.
ಮುಖ್ಯ ಪ್ರಭಾಷಣ ನಡೆಸಿದ ಕೇರಳ ರಾಜ್ಯ ಎಸ್ಸೆಸ್ಸೆಪ್ ಕಾರ್ಯದರ್ಶಿ ಅನಸ್ ಅಮಾನಿ ಪುಷ್ಪ ಗಿರಿ ಉಸ್ತಾದರು ಸಮಾಜದಲ್ಲಿ ನಡೆಯುತ್ತಿರುವ ಕೆಡುಕುಗಳನ್ನು ಎಲೆ ಎಲೆಯಾಗಿ ವಿವರಿಸಿ ಅದನ್ನು ತಡೆಗಟ್ಟುವ ಅನಿವಾರ್ಯತೆ ಗಳನ್ನು ಸಭಿಕರಿಗೆ ಮನಮುಟ್ಟುವ ರೀತಿಯಲ್ಲಿ ವಿವರಿಸಿದರು.
ಸಯ್ಯದ್ ಅಹ್ಮದ್ ಜಲಾಲುದ್ದೀನ್ ತಂಗಳ್ ಮಳ್ಹರ್ ದುಆಗೆ ನೇತೃತ್ವ ನೀಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಅನಸ್ ಸಿದ್ದೀಕಿ ಶಿರಿಯಾ, ಇಬ್ರಾಹಿಂ ಸಖಾಫಿ ಪಯೋಟಾ, ಹಬೀಬ್ ನೂರಾನಿ,ಅಬ್ದುಲ್ ಲತೀಫ್ ನಈಮಿ,ಅಬ್ಬಾಸ್ ನಿಝಾಮಿ, ಅಬೂಬಕ್ಕರ್ ಅಹ್ಶನಿ,ಶಬೀಬ್,ಅಖ್ತ ಹುಸೈನ್ ಮುಂತಾದ ನಾಯಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಂಶುದ್ದೀನ್ ಅಝ್‌ಹರಿ ಸ್ವಾಗತಿಸಿ ಶಿಹಾಬ್ ಮಡಿವಾಳ ವಂದಿಸಿದರು.