janadhvani

Kannada Online News Paper

ಸಿಟಿ ಚೆಕ್-ಇನ್ ವಿಸ್ತರಣೆ: ಏರ್ ಅರೇಬಿಯಾ ಪ್ರಯಾಣಿಕರಿಗೆ ಶಾರ್ಜಾ ಮುವೈಲಾದಲ್ಲೂ ‘ಚೆಕ್-ಇನ್’ ಕೇಂದ್ರ ಆರಂಭ

ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಕೇಂದ್ರ ಕಾರ್ಯನಿರ್ವಹಿಸಲಿದೆ

ಶಾರ್ಜಾ: ಏರ್ ಅರೇಬಿಯಾ ಪ್ರಯಾಣಿಕರು ಈಗ ಶಾರ್ಜಾದ ಮುವೈಲಾದಲ್ಲಿ ಚೆಕ್-ಇನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಸಿಟಿ ಚೆಕ್ ಇನ್ ವ್ಯವಸ್ಥೆಯನ್ನು ವಿಸ್ತರಿಸುವ ಭಾಗವಾಗಿ ಮುವೈಲಾದಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ.

ಅಲ್ ಮದೀನ ಶಾಪಿಂಗ್ ಸೆಂಟರ್ ಎದುರು ಶಾರ್ಜಾ ಮುವೈಲಾದಲ್ಲಿ ಹೊಸ ಸಿಟಿ ಚೆಕ್-ಇನ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಕೇಂದ್ರ ಕಾರ್ಯನಿರ್ವಹಿಸಲಿದೆ.

ವಿಮಾನ ಹೊರಡುವ 24 ಗಂಟೆಯಿಂದ 8 ಗಂಟೆಗಳ ಮೊದಲು ಪ್ರಯಾಣಿಕರು ತಮ್ಮ ಲಗೇಜ್ ಅನ್ನು ಇಲ್ಲಿ ಹಸ್ತಾಂತರಿಸುವ ಮೂಲಕ ಚೆಕ್-ಇನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ವಿಮಾನ ನಿಲ್ದಾಣಕ್ಕೆ ಪ್ರಯಾಣವನ್ನು ಸುಗಮಗೊಳಿಸುವುದರ ಜೊತೆಗೆ, ಈ ಸೌಲಭ್ಯವು, ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಕ್ಯೂನಲ್ಲಿ ದಟ್ಟಣೆಯನ್ನು ತಪ್ಪಿಸುವ ಗುರಿಯನ್ನು ಹೊಂದಿದೆ.

ಏರ್ ಅರೇಬಿಯಾ ಪ್ರಸ್ತುತ ಅಬುಧಾಬಿ, ಅಜ್ಮಾನ್ ಸಫೀರ್ ಮಾಲ್, ಶಾರ್ಜಾ ಸಫೀರ್ ಮಾಲ್ ಮತ್ತು ರಾಸ್ ಅಲ್ ಖೈಮಾ ಅಲ್ ನಖೀಲ್‌ನ ಐದು ಕೇಂದ್ರಗಳಲ್ಲಿ ಸಿಟಿ ಚೆಕ್-ಇನ್ ಸೌಲಭ್ಯಗಳನ್ನು ಹೊಂದಿದೆ.

error: Content is protected !! Not allowed copy content from janadhvani.com