ಮಕ್ಕತುಲ್ ಮುಕರ್ರಮಃ: ಪ್ರಸಕ್ತ ಸಾಲಿನ ಹಜ್ ಕರ್ಮ ನಿರ್ವಹಿಸಲು ಪ್ರಪಂಚದ ಎಲ್ಲಾ ದಿಕ್ಕುಗಳಿಂದಲೂ ಹಜ್ಜಾಜ್‌ಗಳ ತಂಡ ಪವಿತ್ರ ಭೂಮಿಗೆ ತಲುಪುತ್ತಿದೆ.ಅರ್ಧ ಲಕ್ಷಕ್ಕಿಂತಲೂ ಮಿಕ್ಕ ಭಾರತೀಯ ಯಾತ್ರಿಕರು ಈಗಾಗಲೇ ಪವಿತ್ರ ಭೂಮಿಗೆ ಆಗಮಿಸಿದ್ದಾರೆ.
ಹಜ್ ಯಾತ್ರಿಕರ ಸೇವೆಯಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಹಜ್ ವಾಲೇಂಟೀರ್ ಕೋರ್ (HVC) ತಂಡವು ಕರ್ಮ ಭೂಮಿಯಲ್ಲಿ ಸದಾ ಕಾರ್ಯ ನಿರತವಾಗಿದೆ.
HVC ಯ ಸೇವೆಯನ್ನು ಹಜ್ ಯಾತ್ರಿಕರು ಶ್ಲಾಘಿಸಿದ್ದು, ಪ್ರತ್ಯೇಕವಾಗಿ ಕನ್ನಡಿಗ ಯಾತ್ರಿಕರಿಗೆ ಬಹಳ ಸಂತೋಷವನ್ನುಂಟುಮಾಡಿದೆ.
ಪವಿತ್ರ ಹಜ್‌ಗಾಗಿ ಮಕ್ಕಾ ತಲುಪಿರುವ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ SYS ಅಧ್ಯಕ್ಷರಾದ ಹಫೀಲ್ ಸಅದಿ ಕೊಡಗು ಅವರನ್ನು ಕೆಸಿಎಫ್ HVC ತಂಡವು ಭವ್ಯವಾಗಿ ಸ್ವಾಗತಿಸಿದೆ.
ಹಜ್ ಯಾತ್ರಿಕರನ್ನು ಸ್ವಾಗತಿಸಿ, ಮಾರ್ಗ ನಿರ್ದೇಶನ ನೀಡುತ್ತಿರುವ HVC ಸೇವಕರ ತಂಡ








