janadhvani

Kannada Online News Paper

ಚಿಕ್ಕಮಗಳೂರು ಜಿಲ್ಲೆ ಬುದ್ದಿವಂತರ ಜಿಲ್ಲೆಯಾಗಿ ಪರಿವರ್ತನೆ ಫೈರೋಜ್ ರಜ್ವಿ

ದ.ಕ. ಜಿಲ್ಲೆ ಬುದ್ದಿವಂತರ ಜಿಲ್ಲೆ ಎಂದು ಖ್ಯಾತಿ ಪಡೆದಿದ್ದು ಈಗ ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡುವ ಮೂಲಕ ದ್ವೇಷ ರಾಜಕಾರಣವನ್ನು ತೊಲಗಿಸಿ ಪ್ರೀತಿ ರಾಜಕಾರಣದ ಬಾಗಿಲು ತೆರೆದು ದ.ಕ. ಜಿಲ್ಲೆಯನ್ನು ಹಿಂದಿಕ್ಕಿ ಬುದ್ದಿವಂತರ ಜಿಲ್ಲೆಯಾಗಿ ಖ್ಯಾತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.

ಶಾಂತಿ ಸಹಬಾಳ್ವೆಗೆ, ಮತ್ತು ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿರುವ ಮಲೆನಾಡು ಭಾಗದ ಸರ್ವಧರ್ಮ ಮತದಾರರು ಅತಿ ಚಾಣಾಕ್ಷತನದಿಂದ ಕೋಮುವಾದಿ ಮನಸ್ಥಿತಿಯುಳ್ಳವರಿಗೆ ತಿರಸ್ಕರಿಸಿ ಕೋಮುಸೌಹಾರ್ದ ಕಾಪಾಡಿಕೊಂಡು ಎಲ್ಲಾ ಸಮುದಾಯದ ನಾಗರಿಕರಿಗೆ ಸ್ವತಂತ್ರವಾಗಿ ಬಾಳಲು ಅವಕಾಶ ಕಲ್ಪಿಸಿ ಕೊಟ್ಟಿರುವ ಮತದಾರ ಬಂದುಗಳು ಕೈಗೊಂಡಿರುವ ನಿರ್ಧಾರ ದೇಶದ ಪ್ರಜಾಪ್ರಭುತ್ವ ಉಳಿಸುವ ಹೋರಾಟದಲ್ಲಿ ಜಯ ಸಿಕ್ಕಿದಂತಾಗಿದೆ ಮುಂದಿನ ದಿನಗಳಲ್ಲಿ ವಿಶಾಲ ಕರ್ನಾಟಕ ಮತ್ತು ನಮ್ಮ ಪ್ರೀತಿಯ ಜಿಲ್ಲೆಗೆ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ವಿಶ್ವಾಸವಿದೆ.

ನಮ್ಮ ಜಿಲ್ಲೆಯಲ್ಲಿ ಈ ಬಾರಿ ಐದೂ ಕ್ಷೇತ್ರಗಳಲ್ಲಿ ಜಾತ್ಯತೀತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಹಾಗು ರಾಜ್ಯದಲ್ಲಿ ಸ್ಪಷ್ಟ ಬಹುಮತ ತಂದು ಕೊಟ್ಟು ಕೇವಲ ಒಂದು ಪಕ್ಷದ ಜಯವಲ್ಲ ಇದು ಇಡೀ ಕನ್ನಡಿಗರ ಜಯವಾಗಿದೆ ಎಂದು ತಿಳಿಸಲಾಗಿದೆ ವಿಶೇಷವಾಗಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಚುನಾಯಿತರಾಗಿರುವ ಶಾಸಕರಾದ ಹೆಚ್. ಡಿ. ತಮ್ಮಯ್ಯ ರವರು ಸಮಾನತೆ ಮತ್ತು ಅಭಿವೃದ್ದಿಗೆ ಶ್ರಮಿಸಲು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಜಿಲ್ಲೆಗೆ ಕೀರ್ತಿ ತಂದು ಕೊಡುವ ಮೂಲಕ ನೆಚ್ಚಿನ ಜನನಾಯಕರಾಗಿ ವಿಶ್ವಾಸ ಗಳಿಸಲು ಸಂಪೂರ್ಣ ಕಾರ್ಯಪ್ರವೃತ್ತರಾಗಲಿ ಎಂದು ಚಿಕ್ಕಮಗಳೂರು ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com