ಜಿದ್ದಾ: ಅಂತರ್ಯುದ್ಧದ ನಂತರ ಸುಡಾನ್‌ನಲ್ಲಿ ಸಿಲುಕಿರುವ ಸಹಸ್ರಾರು ಭಾರತೀಯರನ್ನು ರಕ್ಷಿಸುವ ಸಲುವಾಗಿ ಭಾರತ ಸರ್ಕಾರ ಜಾರಿಗೆ ತಂದಿರುವ ಆಪರೇಷನ್ ಕಾವೇರಿಯ ಭಾಗವಾಗಿ ಅಬೀರ್ ಮೆಡಿಕಲ್ ಗ್ರೂಪ್ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದೆ.
ಮಿಲಿಟರಿ ಬಣಗಳ ನಡುವಿನ ಹೋರಾಟವು ಉಲ್ಬಣಗೊಂಡಂತೆ, ಸುಡಾನ್‌ನಲ್ಲಿ ಸಿಲುಕಿದ್ದ 3,500 ಕ್ಕೂ ಹೆಚ್ಚು ಭಾರತೀಯರಲ್ಲಿ ಸುಮಾರು 1,300 ಜನರು ಆಪರೇಷನ್ ಕಾವೇರಿಯ ಭಾಗವಾಗಿ ಜಿದ್ದಾದ ಮೂಲಕ ಭಾರತಕ್ಕೆ ಮರಳಿದರು. ಜಿದ್ದಾ ಇಂಡಿಯನ್ ಇಂಟರ್‌ನ್ಯಾಶನಲ್ ಸ್ಕೂಲ್, ಜಿದ್ದಾಕ್ಕೆ ಹಡಗು ಮತ್ತು ವಿಮಾನದ ಮೂಲಕ ಬರುವ ಪ್ರಯಾಣಿಕರಿಗೆ ತಾತ್ಕಾಲಿಕ ವಿರಾಮ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿ ಭಾರತೀಯ ಅಧಿಕಾರಿಗಳು ಮತ್ತು ಸ್ವಯಂಸೇವಕರೊಂದಿಗೆ ಅಬೀರ್ ಮೆಡಿಕಲ್ ಗ್ರೂಪ್‌ನ ಪರಿಣಿತ ವೈದ್ಯಕೀಯ ತಂಡವು ಮೊದಲ ದಿನದಿಂದ ಹಿಂದಿರುಗುವವರಿಗಾಗಿ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದೆ.
ಅಬೀರ್ ಮೆಡಿಕಲ್ ಗ್ರೂಪ್‌ನ ಪರಿಣತ ವೈದ್ಯರಾದ, ಡಾ. ಹಾರೂನ್ ರಶೀದ್, ಡಾ. ಮುಹಮ್ಮದ್ ಖಾಜಾ, ಡಾ. ಅತೀಫ್, ದಾದಿಯರು ಹಾಗೂ ಪ್ಯಾರಾಮೆಡಿಕಲ್ ವೃತ್ತಿಪರರನ್ನು ಒಳಗೊಂಡ 10 ಕ್ಕೂ ಹೆಚ್ಚು ವೃತ್ತಿಪರರ ತಂಡವು, ಆಂಬ್ಯುಲೆನ್ಸ್ ಸೇವೆಯೂ ಸೇರಿದಂತೆ ಆಪರೇಷನ್ ಕಾವೇರಿಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ.
ಡಾ.ಜಮ್ಶಿತ್ ಅಹಮದ್, ಡಾ.ಅಹ್ಮದ್ ಆಲುಂಗಲ್, ಡಾ.ಇಮ್ರಾನ್, ಸಿದ್ದಿಕ್ ಮತ್ತಿತರರು ಕಾರ್ಯಚಟುವಟಿಕೆಗಳನ್ನು ಸಂಯೋಜಿಸುತ್ತಿದ್ದಾರೆ.