janadhvani

Kannada Online News Paper

ಎಪ್ರಿಲ್ 14ರಂದು ಬಹರೈನ್ ಕೆಸಿಎಫ್ ನಡೆಸಿದ ಗ್ರಾಂಡ್ ಇಫ್ತಾರ್ ಸಂಗಮ

ದಿನಾಂಕ 14-04-2023 ಶುಕ್ರವಾರ ಬಹರೈನ್, ಮನಾಮದ ಕನ್ನಡ ಭವನದಲ್ಲಿ ಕೆಸಿಎಫ್ ಬಹರೈನ್ ರಾಷ್ಟ್ರೀಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲರವರ ಅಧ್ಯಕ್ಷತೆಯಲ್ಲಿ ಗ್ರಾಂಡ್ ಇಫ್ತಾರ್ ಸಂಗಮವು ಮನಾಮ ಯಶಸ್ವಿಯಾಗಿ ನಡೆಯಿತು.

ಅಸ್ಸಯ್ಯಿದ್ ಬಾಫಖಿ ತಂಙಲ್ ರವರು ದುಆ ನೆರವೇರಿಸಿದರು. ಕೆ.ಸಿ.ಎಫ್ ಉಲಮಾಗಳ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು.

ಕರ್ನಾಟಕದ ಪ್ರಮುಖ ವಿದ್ವಾಂಸರು, ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಸದಸ್ಯರಾದ ಬಹು. ಜಿ.ಎಂ.ಕಾಮಿಲ್ ಸಖಾಫಿ ಉಸ್ತಾದರು ಮುಖ್ಯ ಪ್ರಭಾಷಣವನ್ನು ನಡೆಸಿ ಅನಿವಾಸಿ ಕನ್ನಡಿಗರ ಹೆಮ್ಮೆಯಾದ ಕೆ.ಸಿ.ಎಫ್ ನ ಕಾರ್ಯ ವೈಖರಿಯನ್ನು ಪ್ರಶಂಸಿದರು. ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮಹ್ಮೂದ್ ಅಲೀ ಮುಸ್ಲಿಯಾರ್ ಕೊಡಗು, ಪ್ಯಾಲೆಸ್ತೀನ್ ಅಂಬಾಸಿಡರ್ HE. Mr. ಅಬ್ದುಲ್ ಖಾದರ್, ಇಜಾಝ್ ಅಸ್ಲಮ್ ಶೈಖ್ (ಸೆಕೆಂಡ್ ಸೆಕ್ರೆಟರಿ ಇಂಡಿಯನ್ ಎಂಬಸ್ಸಿ), ಮನ್ಸೂರ್ ಹೆಜಮಾಡಿ (ಫೌಂಡರ್ ಹಾಗೂ ಸಿಇಒ ಸಾರಾ ಗ್ರೂಪ್) ರಮೀ ರಶೀದ್, ಸೈಯ್ಯಿದ್ ವಾಜಿದ್, ಖುರ್ಷಿದ್ ಆಲಮ್, ಗಯಾಝುದ್ದೀನ್ ಮೈಸೂರು, ಜಾಫರ್ ಮೊಯ್ದೀನ್, ಶಕೀಲ್ ಅಝಮಿ, ಶಾಫಿ ಪರಕಟ್ಟ, ಮುಹಮ್ಮದ್ ಅಲೀ ಮುಸ್ಲಿಯಾರ್ ವೇಣೂರು, ಮನ್ಸೂರ್ ಬೆಳ್ಮ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಸೂಫಿ ಪಯಂಬಚಾಲ್, ಸ್ವಾಗತ ಸಮಿತಿ ಕನ್ವೀನರ್ ಅಶ್ರಫ್ ಕಿನ್ಯ,ಫೈನಾನ್ಸ್ ಕಂಟ್ರೋಲರ್ ಇರ್ಫಾನ್ ಮೇಲ್ಕಾರ್ ಹಾಗೂ ವಿವಿಧ ಸಂಘಟನೆಗಳ ನೇತಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತಿಸಿದ ಕಾರ್ಯಕ್ರಮವನ್ನು ಸ್ವಾಗತ ಸಮಿತಿ ಚೇರ್ಮ್ಯಾನ್ ಹಾಗೂ ಅಂತರಾಷ್ಟ್ರೀಯ ಸಮಿತಿ ಕ್ಯಾಬಿನೆಟ್ ಅಂಗ ಬಶೀರ್ ಕಾರ್ಲೆಯವರು ನಿರೂಪಿಸಿ, ಶಿಹಾಬುದ್ದೀನ್ ಪರಪ್ಪ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com