janadhvani

Kannada Online News Paper

ವಲಸಿಗರಿಗೆ ಶುಭ ಸುದ್ದಿ: ಯುಎಇ, ಸೌದಿ ಸಹಿತ ಹತ್ತು ದೇಶಗಳಿಂದ UPI ಸೇವೆ ಲಭ್ಯ

ಅಂತರಾಷ್ಟ್ರೀಯ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ವಹಿವಾಟುಗಳನ್ನು ನಡೆಸಲು ಸಾಧ್ಯವಾಗಲಿದೆ

ಮುಂಬೈ: ಅನಿವಾಸಿ ಭಾರತೀಯರು ಇನ್ಮುಂದೆ ಯುಪಿಐ(Unified Payments Interface – UPI) ಮೂಲಕ ಹಣ ಪಾವತಿ ಮಾಡಬಹುದು. ಮೊದಲ ಹಂತದಲ್ಲಿ ಹತ್ತು ದೇಶಗಳ ವಲಸಿಗರಿಗೆ ಈ ಸೌಲಭ್ಯವನ್ನು ಸಿದ್ಧಪಡಿಸಲಾಗುತ್ತಿದೆ.ಭಾರತೀಯ ಮೊಬೈಲ್ ಸಂಖ್ಯೆ ಇಲ್ಲದಿದ್ದರೂ ವಹಿವಾಟು ನಡೆಸಲು ಸಾಧ್ಯವಾಗಲಿದೆ.

ಪ್ರಥಮ ಹಂತದಲ್ಲಿ ಯುಎಇ, ಸೌದಿ ಅರೇಬಿಯಾ, ಕತಾರ್, ಒಮಾನ್, ಯುಎಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ, ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಭಾರತೀಯ ವಲಸಿಗರಿಗೆ UPI ವಹಿವಾಟುಗಳು ಲಭ್ಯವಾಗಲಿದೆ.

ಅನಿವಾಸಿ ಬಾಹ್ಯ (NRE) ಮತ್ತು ಅನಿವಾಸಿ ಸಾಮಾನ್ಯ (NRO) ಬ್ಯಾಂಕ್ ಖಾತೆಗಳನ್ನು ಹೊಂದಿರುವ ವಲಸಿಗರು ಅಂತರಾಷ್ಟ್ರೀಯ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ವಹಿವಾಟುಗಳನ್ನು ನಡೆಸಲು ಸಾಧ್ಯವಾಗಲಿದೆ ಎಂದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payments Corporation of India-NPCI) ಘೋಷಿಸಿದೆ.

ಪ್ರಸ್ತುತ, ಭಾರತೀಯ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಮಾತ್ರ UPI ವಹಿವಾಟುಗಳನ್ನು ನಡೆಸಲು ಸಾಧ್ಯವಾಗಿತ್ತು.

error: Content is protected !! Not allowed copy content from janadhvani.com