janadhvani

Kannada Online News Paper

ಅವಧಿ ಮುಗಿದು ಸಂದರ್ಶಕ ವೀಸಾದಲ್ಲಿ ತಂಗಿರುವವರು ದಂಡ ಪಾವತಿಯೊಂದಿಗೆ ಔಟ್ ಪಾಸ್ ಪಡೆಯಬೇಕು

ಹೆಚ್ಚುವರಿ ದಿನಕ್ಕೆ ದಂಡವನ್ನು ಪಾವತಿಸುವ ಜೊತೆಗೆ ಔಟ್ ಪಾಸ್ ಪಡೆಯಲು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕು

ದುಬೈ: ಸಂದರ್ಶಕರ ವೀಸಾದಲ್ಲಿ(Visit Visa) ಯುಎಇ(U.A.E) ಗೆ ಆಗಮಿಸಿ,ವೀಸಾ ಅವಧಿ ಮುಗಿದ ನಂತರ ಯುಎಇಯಲ್ಲಿ ಉಳಿದಿರುವವರು ಪ್ರತೀ ದಿನಕ್ಕೆ ದಂಡ ಪಾವತಿಸುವುದರೊಂದಿಗೆ ದೇಶವನ್ನು ತೊರೆಯಲು ಔಟ್ ಪಾಸ್(Outpass) ನ್ನೂ ಪಡೆಯಬೇಕು.

ಇದನ್ನು ವಿಮಾನ ನಿಲ್ದಾಣಗಳಲ್ಲಿ ಅಥವಾ ಭೂ ಗಡಿ(UAE Land Border) ಚೆಕ್ ಪಾಯಿಂಟ್‌ಗಳಲ್ಲಿನ ವಲಸೆ ಕಚೇರಿ(Immigration Office) ಗಳಿಂದ ಪಡೆಯಬೇಕು. ದುಬೈ ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಮತ್ತು ಫಾರಿನರ್ಸ್ ಅಫೇರ್ಸ್ ನ ಗ್ರಾಹಕ ಸೇವಾ (Customer Service of Dubai General Directorate of Residency and Foreigners Affairs) ಅಧಿಕಾರಿಗಳು ಕೂಡ ಇದನ್ನು ದೃಢಪಡಿಸಿದ್ದಾರೆ.

ವಿಮಾನ ನಿಲ್ದಾಣಗಳು ಮತ್ತು ಭೂ ಗಡಿ ಪಾಯಿಂಟ್‌ಗಳ ಜೊತೆಗೆ, ಅಲ್ ಅವೀರ್ ಇಮಿಗ್ರೇಷನ್ ಆಫೀಸ್‌ನಿಂದ ಔಟ್ ಪಾಸ್‌ಗಳನ್ನು ಖರೀದಿಸಬಹುದು. ವೀಸಾದ ಅವಧಿ ಮುಗಿದ ನಂತರ ದೇಶದಲ್ಲಿ ಉಳಿಯುವ ಪ್ರತಿ ಹೆಚ್ಚುವರಿ ದಿನಕ್ಕೆ ದಂಡವನ್ನು ಪಾವತಿಸಬೇಕು. ಇದರ ಜೊತೆಗೆ ಔಟ್ ಪಾಸ್ ಖರೀದಿಸಲು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಕಳೆದ ಕೆಲವು ದಿನಗಳ ಹಿಂದೆ, ದೇಶ ಬಿಡಲು ವಿಮಾನ ನಿಲ್ದಾಣಕ್ಕೆ ಬಂದ ಅನೇಕರು ಔಟ್ ಪಾಸ್‌ಗಾಗಿ 200 ರಿಂದ 300 ದಿರ್ಹಮ್‌ಗಳನ್ನು ಪಾವತಿಸಿರುವುದಾಗಿ ತಿಳಿದುಬಂದಿದೆ.ದುಬೈನಲ್ಲಿನ ಸಂದರ್ಶಕರ ವೀಸಾಗಳು ಸಾಮಾನ್ಯವಾಗಿ ವೀಸಾ ಮುಕ್ತಾಯ ದಿನಾಂಕದಿಂದ 10 ದಿನಗಳ ಗ್ರೇಸ್ ಅವಧಿಯನ್ನು ಹೊಂದಿರುತ್ತವೆ.

ಇತ್ತೀಚೆಗೆ ಪ್ರಯಾಣಿಸಿದ ಭಾರತೀಯರೊಬ್ಬರು ತಮ್ಮ ಸಂದರ್ಶಕ ವೀಸಾದಲ್ಲಿ ಅವಧೀ ಮೀರಿ ದೇಶದಲ್ಲಿ ಕಳೆದಿದ್ದಕ್ಕಾಗಿ ಆನ್‌ಲೈನ್‌ನಲ್ಲಿ ದಂಡವನ್ನು ಪಾವತಿಸಿದ ನಂತರ, ಅವರು ವಿಮಾನ ನಿಲ್ದಾಣದಲ್ಲಿ ‘ಔಟ್ ಪಾಸ್’ಗಾಗಿ ವಲಸೆಯಲ್ಲಿ ಹೆಚ್ಚುವರಿ Dh240 ಪಾವತಿಸಬೇಕಾಯಿತು ಎಂದು ತಿಳಿಸಿದ್ದಾರೆ. ಔಟ್ ಪಾಸ್ ಪಡೆಯುವ ಪ್ರವಾಸಿಗರು ದೇಶ ತೊರೆದಿರಬೇಕು ಎಂಬ ಷರತ್ತು ಕೂಡ ಇದೆ. ಇಲ್ಲದಿದ್ದಲ್ಲಿ, ಅಂತಹವರಿಗೆ ನಿವಾಸ ವೀಸಾ ಸೇರಿದಂತೆ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.