janadhvani

Kannada Online News Paper

ಸೌದಿ: ಐದು ವೃತ್ತಿಗಳ ಉದ್ಯೋಗ ನೇಮಕಾತಿಗೆ ಕೌಶಲ್ಯ ಪರೀಕ್ಷೆ ಕಡ್ಡಾಯ- ಜನವರಿಯಿಂದ ಆರಂಭ

ಮೊದಲ ಹಂತದಲ್ಲಿ, ಐದು ವೃತ್ತಿಗಳ ನೇಮಕಾತಿಗಳಿಗೆ ಷರತ್ತು ಅನ್ವಯಿಸುತ್ತದೆ.

ರಿಯಾದ್ :ಸೌದಿ ಅರೇಬಿಯಾವು ಭಾರತೀಯರ ಉದ್ಯೋಗ ನೇಮಕಾತಿಗಾಗಿ ಉದ್ಯೋಗ ಕೌಶಲ್ಯ ಪರೀಕ್ಷೆಯನ್ನು(Job Skill Test) ಪ್ರಾರಂಭಿಸಲಿದೆ. ಜನವರಿಯಿಂದ ಐದು ವೃತ್ತಿಗಳಿಗೆ ಭಾರತದ ಪ್ರಮುಖ ನಗರಗಳಲ್ಲಿ ಉದ್ಯೋಗ ಕೌಶಲ್ಯ ಪರೀಕ್ಷೆಗಳನ್ನು ಪ್ರಾರಂಭಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ(Saudi Ministry of Human Resources and Social Development) ಪ್ರಕಟಿಸಿದೆ.

ಅನುಭವಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಮತ್ತು ಕಾರ್ಮಿಕ ಕ್ಷೇತ್ರದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಭಾರತದಿಂದ ಉದ್ಯೋಗ ನೇಮಕಾತಿಗಾಗಿ(Job Recruitment) ಜನವರಿಯಿಂದ ಉದ್ಯೋಗ ಕೌಶಲ್ಯ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಸೌದಿ ಮಾನವ ಸಂಪನ್ಮೂಲ ಸಚಿವಾಲಯ ಪ್ರಕಟಿಸಿದೆ. ಮೊದಲ ಹಂತದಲ್ಲಿ, ಐದು ವೃತ್ತಿಗಳ ನೇಮಕಾತಿಗಳಿಗೆ ಷರತ್ತು ಅನ್ವಯಿಸುತ್ತದೆ.
ಪ್ಲಂಬರ್, ಎಲೆಕ್ಟ್ರಿಷಿಯನ್, ವೆಲ್ಡರ್, ರೆಫ್ರಿಜರೇಶನ್ ಏರ್ ಕಂಡೀಷನಿಂಗ್ ಟೆಕ್ನಿಷಿಯನ್ ಮತ್ತು ಆಟೋಮೊಬೈಲ್ ಎಲೆಕ್ಟ್ರಿಷಿಯನ್( Plumber, Electrician, Welder, Refrigeration Air Conditioning Technician and Automobile Electrician) ಹುದ್ದೆಗಳಿಗೆ ಪರೀಕ್ಷೆಯು ಅನ್ವಯಿಸುತ್ತದೆ.
ನವದೆಹಲಿ ಮತ್ತು ಮುಂಬೈ ನಗರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು. ಸೌದಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ತಾಂತ್ರಿಕ ವೃತ್ತಿಪರ ತರಬೇತಿ ನಿಗಮದ (Saudi Ministry of Foreign Affairs and Technical Vocational Training Corporation) ಸಹಯೋಗದೊಂದಿಗೆ ಸಚಿವಾಲಯವು ಮಾರ್ಚ್ 2021 ರಲ್ಲಿ ಉದ್ಯೋಗ ಕೌಶಲ್ಯ ಪರೀಕ್ಷೆಯನ್ನು ಪ್ರಾರಂಭಿಸಿತು

error: Content is protected !! Not allowed copy content from janadhvani.com