janadhvani

Kannada Online News Paper

ದಮನನೀತಿಯ ವಿರುದ್ಧ ಒಗ್ಗಟ್ಟಿನ ಧ್ವನಿ- ಇಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಸಭೆ

"ಬೆಂಕಿ ಬಿದ್ದಿದೆ ಮನೆಗೆ ಓಡೋಡಿ ಬನ್ನಿ..... ಎಲ್ಲರೂ ಎದ್ದೆದ್ದು ಓಡಿ ಬನ್ನಿ" ಕಯ್ಯಾರರ ಮಾತುಗಳು ನಮಗೆ ಸ್ಪೂರ್ತಿಯಾಗಲಿ

ಮಂಗಳೂರು,ಡಿ.27: ಇತ್ತೀಚಿನ ದಿನಗಳಲ್ಲಿ ದ.ಕ.ಜಿಲ್ಲೆಯಲ್ಲಿ ಏರುತ್ತಿರುವ ಸಮಾಜಘಾತುಕ ಘಟನೆಗಳನ್ನು ಖಂಡಿಸಿ, ಸುನ್ನೀ ಸಂಘಟನೆಗಳು ಇಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಸಭೆಯನ್ನು ನಡೆಸಲಿದೆ.

ಕರಾವಳಿ ಕ್ರೂರಿಗಳ, ರೌಡಿಗಳ, ಕೊಲೆಗಟುಕರ ಊರಾಗುವುದು ಬೇಡ. ಸಾಮ್ಯ-ಸಮರಸದ, ನಿರ್ಭೀತಿಯ, ವೈಭವದ ಕರಾವಳಿಯನ್ನು ಮರಳಿ ಕೊಡಿ ಎಂಬ ಧ್ಯೇಯವನ್ನು ಮುಂದಿಟ್ಟು ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಜಿಲ್ಲಾ ಸಮಿತಿ, ದ. ಕ. ಸುನ್ನೀ ಯುವಜನ ಸಂಘ(SYS), ದ.ಕ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಸಂಜೆ 3 ಗಂಟೆಗೆ ಬೃಹತ್ ಹಕ್ಕೊತ್ತಾಯ ಸಭೆಯನ್ನು ನಡೆಸಲಿದೆ.

ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ದಮನನೀತಿಯ ವಿರುದ್ಧ ಧ್ವನಿಯೆತ್ತೋಣ

ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್
(ಎಸ್.ವೈ.ಎಸ್.ರಾಜ್ಯಾಧ್ಯಕ್ಷರು)

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ನಿರಂತರವಾಗಿ ನಡೆಯುತ್ತಿರುವ ದಮನ ನೀತಿಯ ವಿರುಧ್ಧ ಧ್ವನಿಯೆತ್ತಲು ಮತ್ತು ನ್ಯಾಯ ಸಿಗುವ ವರೆಗೆ ಹೋರಾಟದ ಪ್ರತಿಜ್ಞೆ ಗೈಯ್ಯಲು ಇಂದು ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ಎಲ್ಲ ಸುನ್ನೀ ಕಾರ್ಯಕರ್ತರು, ಹಿತೈಷಿಗಳು ಆಗಮಿಸಿ ಯಶಸ್ವಿ ಗೊಳಿಸಬೇಕು.

ಕಾರ್ಯಕರ್ತರು ಎಸ್ಸೆಸ್ಸೆಫ್ ಮತ್ತು ಎಸ್. ವೈ.ಎಸ್.ಧ್ವಜಗಳನ್ನು ಹಿಡಿದುಕೊಂಡು ಬಂದು ಶಾಂತ ರೀತಿಯಲ್ಲಿ ಹಕ್ಕೊತ್ತಾಯ ಮಂಡಿಸಬೇಕು.

ಯಾವುದೇ ಉದ್ರೇಕಕಾರಿ ಘೋಷಣೆಗಳು, ಸಂಘಟನೆಗಳ ಸಿಧ್ದಾಂತಕ್ಕೆ ವಿರುದ್ದವಾದ ರೀತಿಯ ನಡವಳಿಕೆಗಳು ಇರಕೂಡದು.

ಸುನ್ನೀ ಸಂಘಟನೆಗಳ ಹೆಸರು ಕೆಡಿಸಲು ಹಿತಶತ್ರುಗಳು ಕಾರ್ಯಕ್ರಮದಲ್ಲಿ ನುಸುಳಿ ಅಹಿತಕರ ಘೋಷಣೆ ಕೂಗುವ, ಗೊಂದಲ ಸೃಷ್ಟಿಸುವ ಸಾಧ್ಯತೆ ಇದ್ದು ಅಂತದ್ದೇನಾದರೂ ಕಂಡು ಬಂದಲ್ಲಿ ತಕ್ಷಣ ಮೊಬೈಲ್‌ನಲ್ಲಿ ಅವರ ವೀಡಿಯೋ ಶೂಟಿಂಗ್ ಮಾಡಿ ಸಂಘಟನೆಯ ನಾಯಕರ ಗಮನಕ್ಕೆ ತನ್ನಿರಿ.

ದಕ್ಷಿಣ ಕನ್ನಡದ ಗತಕಾಲ ಪ್ರತಾಪ ಮತ್ತು ಸೌಹಾರ್ದದ ಇತಿಹಾಸವನ್ನು ಮರಳಿ ಪಡೆಯಲು ಎಲ್ಲ ಜಾತಿ ಧರ್ಮದ ಸಹೃದಯರ ಜತೆ ಸೇರಿ ಶ್ರಮಿಸೋಣ. ಗೂಂಡಾ ಸಾಮ್ರಾಜ್ಯವನ್ನು ಕಿತ್ತೊಗೆಯೋಣ.

“ಬೆಂಕಿ ಬಿದ್ದಿದೆ ಮನೆಗೆ ಓಡೋಡಿ ಬನ್ನಿ….. ಎಲ್ಲರೂ ಎದ್ದೆದ್ದು ಓಡಿ ಬನ್ನಿ” ಕಯ್ಯಾರರ ಮಾತುಗಳು ನಮಗೆ ಸ್ಪೂರ್ತಿಯಾಗಲಿ

error: Content is protected !! Not allowed copy content from janadhvani.com