ದೋಹಾ : ಸಅದಿಯ್ಯ ಎಜುಕೇಷನ್ ಫೌಂಡೇಷನ್ ಬೆಂಗಳೂರು ಇದರ ಖತ್ತರ್ ಚಾಪ್ಟರ್ ಸಮಿತಿ ವತಿಯಿಂದ ಸಂಸ್ಥೆಯ ಹಿತೈಶಿಗಳ ಪರಸ್ಪರ ಪರಿಚಯ ವಿನಿಮಯ ಹಾಗೂ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ದಿನಾಂಕ 25-10-2022 ರಂದು ದೋಹಾದ ಗ್ರಾಂಡ್ ಖತ್ತರ್ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಸಾರಥಿ, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರೂ ಆದ ಮೌಲಾನಾ ಶಾಫಿ ಸಅದಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರವನ್ನು, ಲೋಲ ಸಭಾ ಕೇರಳ ಸದಸ್ಯ ಅಬ್ದುಲ್ ರವೂಫ್ ಕೊಂಡೋಟಿ ಉಧ್ಘಾಟಿಸಿ ಮಾತನಾಡಿ, ಸಂಸ್ಥೆಯು ನಡೆಸುವ ಶೈಕ್ಷಣಿಕ ಕ್ರಾಂತಿಕಾರಿ ಚಟುವಟಿಕೆಗಳ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಅದಿಯ್ಯ ಫೌಂಡೇಷನ್ ಸ್ಲಂ-ಕೇರ್ ಡಾಕ್ಯುಮೆಂಟರಿ ಪ್ರದರ್ಶಿಸಿ ಸಂಸ್ಥೆಯ ವತಿಯಿಂದ ನಡೆಸಿದ ಧಾರ್ಮಿಕ ಹಾಗೂ ಶೈಕ್ಷಣಿಕ ಸಮಾಜಮುಖಿ ಕಾರ್ಯ ವೈಖರಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದ ಶಾಫಿ ಸಾದಿಯವರು, ಸಂಸ್ಥೆಗೆ ಆರ್ಥಿಕವಾಗಿ ಬೆನ್ನೆಲುಬಾಗುವಂತೆ ಸಭಿಕರಲ್ಲಿ ವಿನಂತಿಸಿದರು.
ವಿಶೇಷ ಆಹ್ವಾನಿತ ವ್ಯಕ್ತಿಗಳಾಗಿ ಆಗಮಿಸಿದ್ದ ಕೆಸಿಎಫ್ ನಾಯಕರಾದ ಹಾಫಿಳ್ ಫಾರೂಕ್ ಸಖಾಫಿ, ಸಾಮಾಜಿಕ ಕಾರ್ಯಕರ್ತ ಸಿದ್ದೀಕ್ ಚೆರ್ವಲ್ಲೂರು, ಸಯ್ಯಿದ್ ಖಾದ್ರಿ ಸಾಹೆಬ್, ಅತೀಕ್ ಬೆಂಗಳೂರು ಮಾತನಾಡಿ ಸಂಸ್ಥೆಯ ಯಶಸ್ಸಿಗೆ ಶುಭಹಾರೈಸಿದರು.ಸಭೆಯಲ್ಲಿ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹನೀಫ್ ಪಾತೂರು, ಯೂಸುಫ್ ಸಖಾಫಿ ಅಯ್ಯಂಗೇರಿ, ಕೆಬಿ ಹಾಜಿ, ಮುನೀರ್ ಮಾಗುಂಡಿ , ನೌಫಲ್ , ರಾಫಿ ಪರಪ್ಪ, ಯಾಸರ್ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರು: ಮುನೀರ್ ಮಾಗುಂಡಿ
ಪ್ರಧಾನ ಕಾರ್ಯದರ್ಶಿ : ಅಬ್ದುಲ್ ಸತ್ತಾರ್ ಅಶ್ರಫಿ ಮಠ
ಕೋಶಾಧಿಕಾರಿ: ಕಬೀರ್ ದೇರಳಕಟ್ಟೆ
ಕಾರ್ಯದರ್ಶಿಗಳಾಗಿ: ಝುಬೈರ್ ತುರ್ಕಳಿಕೆ.
ಯಾಸಿರ್ ಬೆಂಗಳೂರು.ಸಲಹೆಗಾರರು ಮತ್ತು ಸದಸ್ಯರು:
ಹಾಫಿಲ್ ಫಾರೂಕ್ ಸಖಾಫಿ
ಫಾರೂಕ್ ಕ್ರಷ್ಣಾಪುರ
ಖಾದ್ರಿ ಸಾಹೆಬ್
ಕೆಬಿ ಹಾಜಿ
ಯೂಸುಫ್ ಸಖಾಫಿ
ನೌಫಲ್
ಅಬ್ದುಲ್ ರವೂಫ್ ಕೊಂಡೋಟಿ
ಸಿದ್ದೀಕ್ ಚೆರ್ವಲ್ಲೂರು
ಅತೀಕ್ ಬೆಂಗಳೂರು
ಶರೀಫ್ ಸಖಾಫಿ ಯವರನ್ನು ಆಯ್ಕೆ ಮಾಡಲಾಯಿತು.ಫಾರೂಖ್ ಕೃಷ್ಣಾಪುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಯಾಸೀರ್ ಬೆಂಗಳೂರು ಧನ್ಯವಾದಗೈದರು.