ಜಿದ್ದಾ : ಸೌದಿ ಅರೇಬಿಯಾದಲ್ಲಿ ಸಾಂಕ್ರಾಮಿಕ ಜ್ವರ ಹರಡುತ್ತಿರುವ ಕಾರಣ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸಬೇಕೆಂದು ಆರೋಗ್ಯ ಸಚಿವಾಲಯ(Saudi Health Ministry) ಸೂಚಿಸಿದೆ. ಕಾಲೋಚಿತ ಇನ್ಫ್ಲುಯೆನ್ಝವು(seasonal influenza) ಗಂಭೀರ ಆರೋಗ್ಯ ಪರಿಣಾಮಕ್ಕೆ ಕಾರಣವಾಗಬಹುದು. ಆದ್ದರಿಂದ ಎಲ್ಲರೂ ಫ್ಲೂ ಲಸಿಕೆಯನ್ನು (influenza Vaccine) ಪಡೆಯುವಂತೆ ಸಚಿವಾಲಯವು ಸೂಚಿಸಿದೆ.
ಸೌದಿ ಅರೇಬಿಯಾದಲ್ಲಿ ಚಳಿಗಾಲದ ಆರಂಭದೊಂದಿಗೆ ಸಾಂಕ್ರಾಮಿಕ ಜ್ವರ ಹರಡಲು ಪ್ರಾರಂಭಿಸಿದೆ. ಕಾಲೋಚಿತ ಇನ್ಫ್ಲುಯೆನ್ಝ ದ ಮುಖ್ಯ ಲಕ್ಷಣಗಳೆಂದರೆ (seasonal influenza symptoms) ಮೂಗು ಸೋರಿಕೆ, ಗಂಟಲು ನೋವು , ಸ್ನಾಯು ನೋವು, ಒಣ ಕೆಮ್ಮು, ಶೀತ ಮತ್ತು ತಲೆನೋವು ಮುಂತಾದವುಗಳು. ಕಾಲೋಚಿತ ಇನ್ಫ್ಲುಯೆನ್ಝ ವೈರಸ್ (seasonal influenza virus) ಸೋಂಕಿತ ಜನರ ಉಸಿರಾಟದ ಮೂಲಕ ಹತ್ತಿರದ ಜನರಿಗೆ ಹರಡುವ ಸಾಧ್ಯತೆಯಿದೆ.
ಸೂಕ್ತ ಚಿಕಿತ್ಸೆ ನೀಡದಿದ್ದರೆ ನ್ಯುಮೋನಿಯಾ, ಉಸಿರಾಟದ ಕಾಯಿಲೆಗಳು ಮತ್ತು ರಕ್ತ ವಿಷ ಬಾಧೆ ಮುಂತಾದವುಗಳಿಗೆ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಮಾಸ್ಕ್ ಧರಿಸುವುದು ಮತ್ತು ಕಣ್ಣುಗಳು ಮತ್ತು ಬಾಯಿಯೊಂದಿಗೆ ನೇರ ಸಂಪರ್ಕವನ್ನು ತಪ್ಪಿಸುವುದು ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳಾಗಿವೆ.
ಸಾರ್ವಜನಿಕ ಸ್ಥಳಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಮತ್ತು ರೋಗಿಗಳನ್ನು ಭೇಟಿ ಮಾಡುವ ಸಂದರ್ಭಗಳಲ್ಲಿ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳನ್ನು ಪಾಲಿಸಬೇಕಾಗಿದೆ.ಎಲ್ಲರೂ ಫ್ಲೂ ಲಸಿಕೆ(influenza Vaccine) ತೆಗೆದುಕೊಳ್ಳುವಂತೆ, ತಮ್ಮ ಕೈಗಳನ್ನು ತೊಳೆದುಕೊಳ್ಳಲು ಮತ್ತು ಸೀನುವಾಗ ಮತ್ತು ಕೆಮ್ಮುವಾಗ ಟಿಶ್ಯೂ ಅಥವಾ ಕರವಸ್ತ್ರ(kerchief) ಬಳಸುವಂತೆ ಸಚಿವಾಲಯವು ಕೇಳಿದೆ.