janadhvani

Kannada Online News Paper

ಸೌದಿ: ಮಲ್ಟಿಪಲ್ ಫ್ಯಾಮಿಲಿ ವಿಸಿಟ್ ವೀಸಾವನ್ನು ಆನ್‌ಲೈನ್‌ನಲ್ಲಿ ನವೀಕರಿಸಲಾಗುವುದಿಲ್ಲ- ಜವಾಝಾತ್

ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಪ್ರಚಾರಗೊಳ್ಳುತ್ತಿದೆ

ರಿಯಾದ್: ಸೌದಿ ಅರೇಬಿಯಾಕ್ಕೆ ಬಹು ಕುಟುಂಬ ಭೇಟಿ ವೀಸಾವನ್ನು(Multiple Entry Visit Visa) ಆನ್‌ಲೈನ್‌ನಲ್ಲಿ ನವೀಕರಿಸಲಾಗುವುದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ವೀಸಾವನ್ನು ನವೀಕರಿಸಲು ಸೌದಿ ಅರೇಬಿಯಾದಿಂದ ಹೊರಗೆ ಹೋಗಬೇಕಾಗಿಲ್ಲ ಮತ್ತು ಅದನ್ನು ಪಾಸ್‌ಪೋರ್ಟ್ ನಿರ್ದೇಶನಾಲಯದ (ಜವಾಝಾತ್Jawazat) ಡಿಜಿಟಲ್ ಪ್ಲಾಟ್‌ಫಾರ್ಮ್ ‘ಅಬ್ಶಿರ್'(Absheer) ಮೂಲಕ ಮುಕ್ತಾಯ ದಿನಾಂಕದ ಏಳು ದಿನಗಳ ಮೊದಲು ನವೀಕರಿಸಬಹುದು” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಸೌದಿ ಅರೇಬಿಯಾದಲ್ಲಿ ಮಲ್ಟಿಪಲ್ ಎಂಟ್ರಿ ವಿಸಿಟ್ ವೀಸಾವನ್ನು ನವೀಕರಿಸಲು, ವೀಸಾ ಅವಧಿ ಮುಗಿಯುವ ಮೊದಲು ದೇಶವನ್ನು ತೊರೆಯುವುದು ಕಡ್ಡಾಯವಾಗಿದೆ. ವೀಸಾ ಅವಧಿ ಮುಗಿದ ಮೂರು ದಿನಗಳ ನಂತರ ದಂಡವನ್ನು ವಿಧಿಸಲಾಗುತ್ತದೆ. ಆದರೆ, ಇದು ಏಕ-ಪ್ರವೇಶದ ವೀಸಾ ಆಗಿದ್ದರೆ, ಅದನ್ನು ವಿಮೆ ಪಡೆದು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಪಾಸ್‌ಪೋರ್ಟ್ ನಿರ್ದೇಶನಾಲಯದ ಡಿಜಿಟಲ್ ವೇದಿಕೆಯಾದ ‘ಅಬ್ಶಿರ್’ ಮೂಲಕ ನವೀಕರಿಸಬಹುದು.

error: Content is protected !! Not allowed copy content from janadhvani.com